ADVERTISEMENT

‘ಗೇಟ್‌’ ಪರೀಕ್ಷೆ ಮುಂದೂಡಲು ‘ಸುಪ್ರೀಂ’ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 19:20 IST
Last Updated 3 ಫೆಬ್ರುವರಿ 2022, 19:20 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ (ಪಿಟಿಐ): ಇದೇ 5ರಂದು ನಿಗದಿಯಾಗಿರುವ ಎಂಜಿನಿಯರಿಂಗ್‌ ಗ್ರಾಜುಯೇಟ್‌ ಆಪ್ಟಿಟ್ಯೂಡ್‌ ಪರೀಕ್ಷೆಯನ್ನು (ಗೇಟ್‌) ಮುಂದೂಡಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ.

ಕೋವಿಡ್‌ ಪಿಡುಗಿನ ಸಂಬಂಧ ದೇಶದ ವಿವಿಧೆಡೆ ನಿರ್ಬಂಧ ಜಾರಿಯಲ್ಲಿರುವ ಕಾರಣ ಪರೀಕ್ಷೆಯನ್ನು ಮುಂದೂಡುವಂತೆ ಕೆಲ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯ
ಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರ ಪೀಠ ವಿಚಾರಣೆ ನಡೆಸಿತು.

ಪರೀಕ್ಷೆಗೆ 48 ಗಂಟೆಗಳ ಮೊದಲು ಅದನ್ನು ಮುಂದೂಡುವುದು ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ಕಾರಣ
ವಾಗುತ್ತದೆ. ಪರೀಕ್ಷೆಗಾಗಿ ತಯಾರಿ ನಡೆಸಿರುವ ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ADVERTISEMENT

ಪರೀಕ್ಷೆಯನ್ನು ಯಾವಾಗ ನಡೆಸಬೇಕು ಎಂಬುದು ಶೈಕ್ಷಣಿಕ ನೀತಿಯ ವಿಷಯವಾಗಿದ್ದು, ನ್ಯಾಯಾಲಯ ಅದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿತು.

ಪರೀಕ್ಷೆಗೆ 9 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಇದರಲ್ಲಿ 20,000 ವಿದ್ಯಾರ್ಥಿಗಳು ಪರೀಕ್ಷೆ
ಯನ್ನು ಮುಂದೂಡುವಂತೆ ಆನ್‌ಲೈನ್‌ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.