
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯರ ತಂದೆ ಮೂವರು ಪತ್ನಿಯರು ಹೊಂದಿರುವ ಸಂಗತಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರು, ಕೊರಿಯಾ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದರೆಂದು ಅವರ ತಂದೆ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದರು. ಇದರಿಂದ ಮೂವರೂ ಖಿನ್ನತೆಗೆ ಒಳಗಾಗಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ ಭಾವನಾತ್ಮಕ ಯಾತನೆ ಮತ್ತು ಮೊಬೈಲ್ ಫೋನ್ ಕಸಿದುಕೊಂಡಿದ್ದರಿಂದ ಬಾಲಕಿಯರಿಗೆ ಆನ್‌ಲೈನ್ ಗೇಮ್ ಆಡಲು ಮತ್ತು ಕೊರಿಯಾ ಸ್ನೇಹಿತರ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯರ ತಂದೆ ಕುಮಾರ್ ಅವರು ಸುಜಾತ, ಹೀನಾ ಮತ್ತು ಟೀನಾ ಎಂಬ ಮೂವರು ಪತ್ನಿಯರನ್ನು ಹೊಂದಿದ್ದಾರೆ. ಅವರೆಲ್ಲರೂ ಜೈವಿಕ ಸಹೋದರಿಯರು ಎಂದು ಪೊಲೀಸರು ದೃಢಪಡಿಸಿದ್ದಾರೆ.
ಸುಜಾತ ಅವರು ನಿಶಿಕಾಳ ತಾಯಿಯಾಗಿದ್ದರೆ, ಹೀನಾ ಅವರು ಪ್ರಾಚಿ ಮತ್ತು ಪಾಖಿಯಳ ತಾಯಿಯಾಗಿದ್ದಾರೆ.
ನಿಶಿಕಾ (16), ಪ್ರಾಚಿ (14) ಮತ್ತು ಪಾಖಿ (12) ಇತ್ತೀಚೆಗೆ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂವರು ಬಾಲಿಕಿಯರು ತಾಯಿಗಿಂತಲೂ ತಂದೆಯೊಂದಿಗೆ ಹೆಚ್ಚು ಬಾಂಧವ್ಯ ಹೊಂದಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.