ADVERTISEMENT

ಗಿರೀಶ್‌ಚಂದ್ರ ಮುರ್ಮು ನೂತನ ಸಿಎಜಿ

ಪಿಟಿಐ
Published 6 ಆಗಸ್ಟ್ 2020, 22:29 IST
Last Updated 6 ಆಗಸ್ಟ್ 2020, 22:29 IST
ಗಿರೀಶ್‌ಚಂದ್ರ ಮುರ್ಮು
ಗಿರೀಶ್‌ಚಂದ್ರ ಮುರ್ಮು   

ನವದೆಹಲಿ: ಗಿರೀಶ್‌ಚಂದ್ರ ಮುರ್ಮು ಅವರನ್ನು ದೇಶದ ನೂತನ ಮಹಾಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರನ್ನಾಗಿ (ಸಿಎಜಿ) ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ.

ಕೇಂದ್ರಾಡಳಿತ ಪ್ರದೇಶ ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಆಗಿದ್ದ ಮುರ್ಮು, ಬುಧವಾರವಷ್ಟೆ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಸ್ತುತ ಸಿಎಜಿ ಆಗಿರುವ ರಾಜೀವ್‌ ಮೆಹ್ರಿಷಿ ಅವರಿಗೆ ಆಗಸ್ಟ್‌ 8ರಂದು 65 ವರ್ಷ ತುಂಬಲಿದ್ದು, ಅವರು ಈ ಹುದ್ದೆಯಿಂದ ನಿವೃತ್ತರಾಗುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT