ADVERTISEMENT

ಇನ್‌ಸ್ಟಾಗ್ರಾಮ್ ಗೆಳತಿ ಮೇಲೆ ರೇಪ್: ಸಂತ್ರಸ್ತೆ ತಾಯಿಗೆ ಚಿತ್ರ ಕಳುಹಿಸಿದ ಆರೋಪಿ

ಪಿಟಿಐ
Published 2 ಫೆಬ್ರುವರಿ 2023, 3:12 IST
Last Updated 2 ಫೆಬ್ರುವರಿ 2023, 3:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುರುಗ್ರಾಮ: 16 ವರ್ಷದ ಬಾಲಕಿ ಮೇಲೆ ಇನ್‌ಸ್ಟಾಗ್ರಾಮ್ ಸ್ನೇಹಿತ ಅತ್ಯಾಚಾರ ನಡೆಸಿ, ವಿಡಿಯೊ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಬಾಲಕಿಯ ಅಶ್ಲೀಲ ಚಿತ್ರವನ್ನು ಆರೋಪಿಯು ಆಕೆಯ ತಾಯಿಗೆ ಕಳುಹಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ವರ್ಷ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮಗಳ ಜೊತೆ ಸ್ನೇಹ ಬೆಳೆಸಿ, ಬೆತ್ತಲೆ ವಿಡಿಯೊ ಕಾಲ್‌ಗಳನ್ನು ಸಹ ಮಾಡಿದ್ದಾನೆ ಎಂದು ಬಾಲಕಿಯ ತಾಯಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

‘ನನ್ನ ಮಗಳನ್ನು ಗುರುಗ್ರಾಮದ ಹೋಟೆಲ್‌ಗೆ ಕರೆದಿದ್ದ ವ್ಯಕ್ತಿಯು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಮಗಳನ್ನು ಮತ್ತೆ ಎರಡು ಮೂರು ಬಾರಿ ಹೋಟೆಲ್‌ಗೆ ಕರೆದಿದ್ದ ಆತ, ಬರದಿದ್ದರೆ ಬೆತ್ತಲೆ ವಿಡಿಯೊ ಮತ್ತು ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ’ ಎಂದು ಅವರು ಹೇಳಿದ್ದಾರೆ.

‘ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಮಗಳ ಅಶ್ಲೀಲ ಚಿತ್ರವನ್ನು ಪೋಸ್ಟ್ ಮಾಡಿರುವ ಆತ, ನನಗೂ ಕಳುಹಿಸಿದ್ದಾನೆ. ಈ ಬಗ್ಗೆ ಮಗಳನ್ನು ವಿಚಾರಿಸಿದಾಗ ಸಂಪೂರ್ಣ ವಿಚಾರ ತಿಳಿಸಿದ್ದಾಳೆ’ಎಂದು ತಾಯಿ ಹೇಳಿದ್ದಾರೆ.

ಪ್ರಕರಣ ಸಂಬಂಧ ರಾಜ್ ದ್ವಿವೇದಿ ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯ, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.