ADVERTISEMENT

ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲವೇ ₹ 5 ಕೋಟಿ ಕೊಡಿ: ಮಗ-ಸೊಸೆ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 13 ಮೇ 2022, 9:42 IST
Last Updated 13 ಮೇ 2022, 9:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹರಿದ್ವಾರ: ಮಗ ಮತ್ತು ಸೊಸೆ ಮೊಮ್ಮಗುವನ್ನು ಕೊಟ್ಟಿಲ್ಲ ಎಂಬ ಮಾನಸಿಕ ಸಂಕಟಕ್ಕೆ ಒಳಗಾದ ಮಹಿಳೆಯೊಬ್ಬರು ಕೋರ್ಟ್‌ಗೆ ಮೊರೆ ಹೋದ ಘಟನೆ ಹರಿದ್ವಾರದಲ್ಲಿ ನಡೆದಿದೆ.

'ಒಂದು ವರ್ಷದ ಒಳಗೆ ನಮಗೆ ಮೊಮ್ಮಗುವನ್ನು ಕೊಡಬೇಕು ಅಥವಾ ₹ 5 ಕೋಟಿ ಪರಿಹಾರವನ್ನು ನೀಡಬೇಕು' ಎಂದು ಮಗ ಮತ್ತು ಸೊಸೆ ವಿರುದ್ಧ ವಕೀಲ ಎಂ.ಕೆ.ಶ್ರೀವಾಸ್ತವ ಅವರ ಸಹಾಯದೊಂದಿಗೆ ಹರಿದ್ವಾರ ಸಿವಿಲ್‌ ಕೋರ್ಟ್‌ಗೆ ತಾಯಿ ಮೊರೆ ಹೋಗಿದ್ದಾರೆ.

'ಕಷ್ಟಪಟ್ಟು ಮಗನನ್ನು ಓದಿಸಿದ್ದೇವೆ. ವಿದೇಶದಲ್ಲಿ ತರಬೇತಿ ಕೊಡಿಸಿ ಪೈಲೆಟ್‌ ಮಾಡಿಸಿದ್ದೇವೆ. ಮದುವೆಯನ್ನೂ ಮಾಡಿಸಿದ್ದೇವೆ. ಥೈಲೆಂಡ್‌ಗೆ ಹನಿಮೂನ್‌ ಕೂಡ ಕಳುಹಿಸಿಕೊಟ್ಟಿದ್ದೇವೆ. ಆದರೆ ಮದುವೆಯಾದ ಬಳಿಕ ಪತ್ನಿಯ ಮಾತು ಕೇಳಿಕೊಂಡು ಮಗ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದಾನೆ. ನಮ್ಮೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇಲ್ಲ. ಮಗನ ಏಳ್ಗೆಗಾಗಿ ನಮ್ಮೆಲ್ಲ ಆಸ್ತಿ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ನಮಗೆ ಒಂದು ವರ್ಷದೊಳಗೆ ಮೊಮ್ಮಗು ಬೇಕು, ಇಲ್ಲದಿದ್ದರೆ ಮಗ ಮತ್ತು ಸೊಸೆ ತಲಾ ₹ 2.5 ಕೋಟಿ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.