ADVERTISEMENT

ತಾಂತ್ರಿಕ ಸಮಸ್ಯೆ: ಸಿಯುಇಟಿ ಪರೀಕ್ಷಾರ್ಥಿಗಳ ಅಸಮಾಧಾನ

ಪಿಟಿಐ
Published 5 ಆಗಸ್ಟ್ 2022, 13:39 IST
Last Updated 5 ಆಗಸ್ಟ್ 2022, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ) ಎರಡನೇ ದಿನವಾದ ಶುಕ್ರವಾರ ತಾಂತ್ರಿಕ ಸಮಸ್ಯೆಗಳು ಅಭ್ಯರ್ಥಿಗಳಿಗೆ ಬಾಧಿಸಿದವು.

ಅನೇಕ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆ ಪರೀಕ್ಷೆ ಎದುರಿಸಲು ಕಾಯಬೇಕಾಯಿತು. ಆದರೆ, ಅಂತಿಮವಾಗಿ ಅವರಿಗೆ ದಿನದ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಎಂಬ ಮಾಹಿತಿಯನ್ನು ನೀಡಲಾಯಿತು.

ಆದರೆ, ಪರೀಕ್ಷೆ ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ), ದಿನದ ಮೊದಲ ಅವಧಿಯ ಪರೀಕ್ಷೆ ಸುಗಮವಾಗಿ ನಡೆದಿದೆ. ದೇಶದಾದ್ಯಂತ ಶೇ 95ರಷ್ಟು ಹಾಜರಿ ಇತ್ತು ಎಂದು ತಿಳಿಸಿದೆ.

ADVERTISEMENT

ಮುಂದೂಡಲಾದ ಪರೀಕ್ಷೆಯನ್ನು ಆಗಸ್ಟ್‌ 12ರಂದು ನಡೆಸಲಾಗುವುದು ಎಂದು ತಿಳಿಸಲಾಗಿದೆ. ಭಾರಿ ಮಳೆಯ ಕಾರಣಕೇರಳದಲ್ಲಿ ಆಗಸ್ಟ್ 4, 5 ಮತ್ತು 6ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನೂ ಮುಂದೂಡಲಾಗಿದೆ.

‘ನಾನು 34 ಕಿ.ಮೀ ದೂರದಿಂದ ನೊಯ್ಡಾ ಸೆಕ್ಟರ್‌ 64ಕ್ಕೆ ಪರೀಕ್ಷೆಗೆ ಬಂದಿದೆ. ಟರ್ಮಿನಲ್ಸ್‌ನಲ್ಲಿ ಕೂರಿಸಿದ್ದರು. ಕೊನೆಗೆ ತಾಂತ್ರಿಕ ಕಾರಣದಿಂದ ಪರೀಕ್ಷೆ ನಡೆಸಲಾಗದು ಎಂದು ತಿಳಿಸಿದರು’ ಎಂದು ಅಭ್ಯರ್ಥಿ ಗಣಿಕಾ ಹೇಳಿದರು.

ಇದು ಪರೀಕ್ಷಾ ವ್ಯವಸ್ಥೆ ನಿರ್ವಹಣೆಯ ವೈಫಲ್ಯ ಎಂದು ಮತ್ತೊಬ್ಬ ಅಭ್ಯರ್ಥಿ ಹಮಾನ್‌ಶೆ ಉದರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.