ADVERTISEMENT

Covid-19 Wrold Update| ಈಗ ವಿಶ್ವದಲ್ಲಿ 80 ಲಕ್ಷಕ್ಕೂ ಅಧಿಕ ಸೋಂಕಿತರು 

ರಾಯಿಟರ್ಸ್
Published 16 ಜೂನ್ 2020, 6:50 IST
Last Updated 16 ಜೂನ್ 2020, 6:50 IST
ಬ್ರೆಜಿಲ್‌ನಲ್ಲಿ ಮಹಿಳೆಯೊಬ್ಬರು ಪ್ಲಾಸ್ಟಿಕ್‌ ಹೊದಿಕೆಯ ಮೂಲಕ ತಮ್ಮ ತಾಯಿಯನ್ನು ತಬ್ಬಿಕೊಂಡ ಸನ್ನಿವೇಶ (ಎಎಫ್‌ಪಿ)
ಬ್ರೆಜಿಲ್‌ನಲ್ಲಿ ಮಹಿಳೆಯೊಬ್ಬರು ಪ್ಲಾಸ್ಟಿಕ್‌ ಹೊದಿಕೆಯ ಮೂಲಕ ತಮ್ಮ ತಾಯಿಯನ್ನು ತಬ್ಬಿಕೊಂಡ ಸನ್ನಿವೇಶ (ಎಎಫ್‌ಪಿ)   

ವಾಷಿಂಗ್ಟನ್‌: ಕಳೆದ ವರ್ಷಾಂತ್ಯದಲ್ಲಿ ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಸೋಂಕು ಈಗ ವಿಶ್ವವನ್ನೇ ಆವರಿಸಿಕೊಂಡಿದೆ. ಸದ್ಯ ಜಗತ್ತಿನ ಸೋಂಕಿತರ ಸಂಖ್ಯೆ 80 ಲಕ್ಷದ ಗಡಿ ದಾಟಿದೆ. ಅಮೆರಿಕ ಮತ್ತು ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಲ್ಲಿ ಅದು ತಾಂಡವವಾಡುತ್ತಿದೆ.

ವಿಶ್ವದ 80 ಲಕ್ಷ ಸೋಂಕು ಪ್ರಕರಣಗಳಪೈಕಿ ಶೇ.25ರಷ್ಟು ಅಂದರೆ, 20 ಲಕ್ಷಕ್ಕೂ ಅಧಿಕಪ್ರಕರಣಗಳು ಅಮೆರಿಕದಿಂದಲೇ ವರದಿಯಾಗಿದೆಯಾದರೂ, ಸದ್ಯ ಸೋಂಕು ವೇಗವಾಗಿಹರಡುತ್ತಿರುವುದು ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಲ್ಲಿ. ಅಲ್ಲಿ ಇಡೀ ವಿಶ್ವದ ಶೇ. 21 ರಷ್ಟು ಪ್ರಕರಣಗಳು ವರದಿಯಾಗಿವೆ.

ವಿಶ್ವ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 21,13,366 ಆಗಿದ್ದರೆ, 1,16,135 ಮಂದಿ ಮೃತಪಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 8,88,271 ಕೋವಿಡ್–19 ಪ್ರಕರಣಗಳಿವೆ. ಈ ಪೈಕಿ 43,959 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ಕೊರೊನಾ ವೈರಸ್‌ ಉಲ್ಬಣಗೊಂಡಿರುವ ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳು ಭವಿಷ್ಯದಲ್ಲಿ ಅಮೆರಿಕವನ್ನು ಹಿಂದಿಕ್ಕುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಅಮೆರಿಕದಲ್ಲಿ ಕೆಲ ವಾರಗಳಿಂದ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಕಡಿಮೆಯಾಗಿದ್ದವು. ಆದರೆ, ಕೆಲ ನಗರಗಳಲ್ಲಿ ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗಲಾರಂಭಿಸಿವೆ. ಹೀಗಾಗಿ ಕೊರೊನಾ ವೈರಸ್‌ನ ಎರಡನೇ ಅಲೆ ಅಪ್ಪಳಿಸುವ ಆತಂಕದಲ್ಲಿದೆ ಅಮೆರಿಕ.

ಸದ್ಯ ಜಗತ್ತಿನಲ್ಲಿ 4,36,306 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

ಜಗತ್ತಿನಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳನ್ನು ಹೊಂದಿರುವ ಅಗ್ರ ಐದು ರಾಷ್ಟ್ರಗಳು

- ಅಮೆರಿಕ21,13,366 (1,16,135)
- ಬ್ರೆಜಿಲ್‌ 8,88,271 (43,959)
- ರಷ್ಯಾ 5,36,484 (7,081)
- ಭಾರತ 3,32,424 (9,520)
*ಆವರಣದಲ್ಲಿರುವುದುಸಾವಿನ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.