
ದೇಶದ ಅಭಿವೃದ್ದಿಗೆ ಸರ್ಕಾರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದರಲ್ಲಿ ಪ್ರಜೆಗಳೊಂದಿಗೆ ವಿಶ್ವಾಸ ಹೊಂದುವ ಸರ್ಕಾರಗಳು ರಾಜಕೀಯವಾಗಿ ಯಶಸ್ವಿಯಾಗುತ್ತವೆ. ನ್ಯೂ ಎಡೆಲ್ಮನ್ ಟ್ರಸ್ಟ್ ಬ್ಯಾರೋಮೀಟರ್ ವರದಿಯ ಪ್ರಕಾರ, ವಿಶ್ವದ ಕೆಲವು ದೇಶದ ಸರ್ಕಾರಗಳ ಬಗ್ಗೆ ಜನರು ಹೆಚ್ಚಿನ ನಂಬಿಕೆ ಹೊಂದಿರುವುದಾಗಿ ಅಧ್ಯಯನ ತಿಳಿಸಿವೆ.
ಸೌದಿ ಅರೇಬಿಯಾ
ಸೌದಿ ಅರೇಬಿಯಾದ ಸರ್ಕಾರವು ಹೆಚ್ಚು ವಿಶ್ವಾಸಾರ್ಹ ಗಳಿಸಿದ ಸರ್ಕಾರವಿರುವ ದೇಶವಾಗಿದೆ. ಇಲ್ಲಿನ ಶೇ 87 ರಷ್ಟು ಜನರು ಅಲ್ಲಿನ ಸರ್ಕಾರದ ಬಗ್ಗೆ ವಿಶ್ವಾಸಾರ್ಹತೆಯನ್ನು ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ವಿಶ್ವದಲ್ಲಿಯೇ ಹೆಚ್ಚು ವಿಶ್ವಾಸವುಳ್ಳ ಸರ್ಕಾರವಿರುವ ದೇಶವಾಗಿದೆ.
ಚೀನಾ
ಈ ಪಟ್ಟಿಯಲ್ಲಿ ಚೀನಾ ಎರಡನೇಯ ಸ್ಥಾನದಲ್ಲಿದೆ. ಇಲ್ಲಿನ ಜನರು ಚೀನಾ ಸರ್ಕಾರದ ಬಗ್ಗೆ ವಿಶ್ವಾಸವಿರುವುದಾಗಿ ತಿಳಿಸಿದ್ದಾರೆ. ಶೇ 83ರಷ್ಟು ಸಾರ್ವಜನಿಕರು ಚೀನಾ ಸರ್ಕಾರದ ಬಗ್ಗೆ ವಿಶ್ವಾಸಾರ್ಹತೆಯನ್ನು ವ್ಯಕ್ತ ಪಡಿಸಿರುವುದಾಗಿ ವರದಿ ಹೇಳಿದೆ.
ಭಾರತ:
ಇತ್ತೀಚಿನ ದಿನಗಳಲ್ಲಿ ಭಾರತ ಹೆಚ್ಚು ವಿಶ್ವಾಸಾರ್ಹ ಸರ್ಕಾರಗಳ ರ್‍ಯಾಂಕಿಂಗ್‌ನಲ್ಲಿ ಶೇ 3 ರಷ್ಟು ಏರಿಕೆ ಕಂಡಿದೆ. ಭಾರತೀಯರಿಂದ ಶೇ 79 ರಷ್ಟು ಅಂಕ ಗಳಿಸಿರುವ ಭಾರತ ವಿಶ್ವಾಸಾರ್ಹ ಸರ್ಕಾರಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದೆ.
ಕೆನಡಾ:
ಕೆನಡಾ ದೇಶವು ಈ ಶ್ರೇಣಿಯಲ್ಲಿ 4ನೇ ಸ್ಥಾನ ಪಡೆದಿದೆ. ಇಲ್ಲಿನ ಜನರು ತಿಳಿಸಿರುವಂತೆ ಶೇ 50 ಮಾತ್ರ ಇಲ್ಲಿನ ಸರ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರ್ಜೆಂಟೀನಾ:
ಅರ್ಜೆಂಟೀನಾ ಜನರಲ್ಲಿ ದೇಶದ ಸರ್ಕಾರದ ಮೇಲೆ ವಿಶ್ವಾಸಾರ್ಹತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಳೆದ 2023 ರಿಂದ ಶೇ 21ರಷ್ಟು ಏರಿಕೆಯಾಗಿದೆ. ಇದೀಗ ಶೇ 42 ಕ್ಕೆ ತಲುಪುವ ಮೂಲಕ 5ನೇ ದೇಶವಾಗಿದೆ.
ಅಮೆರಿಕ:
ಶೇ 1ರಷ್ಟು ಹೆಚ್ಚಳದೊಂದಿಗೆ, ಅಮೆರಿಕ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿನ ಸರ್ಕಾರ ಜನರಿಂದ ಶೇ 41ರಷ್ಟು ಮಾತ್ರ ವಿಶ್ವಾಸಾರ್ಹತೆ ಹೊಂದಿದೆ ಎಂದು ವರದಿ ಹೇಳುತ್ತದೆ.
ಬ್ರಿಟನ್:
ಬ್ರಿಟನ್ ಸರ್ಕಾರದ ಮೇಲೆ ಜನರ ವಿಶ್ವಾಸಾರ್ಹತೆ ಶೇ 7ರಷ್ಟು ಏರಿಕೆಯಾಗಿದೆ. ಪ್ರಸ್ತುತ ಶೇ 37ರಷ್ಟು ಅಂಕಗಳಿಸುವ ಮೂಲಕ 7ನೇ ವಿಶ್ವಾಸಾರ್ಹವುಳ್ಳ ಸರ್ಕಾರವಿರುವ ದೇಶವಾಗಿ ಗುರುತಿಸಿಕೊಂಡಿದೆ.
ಜರ್ಮನಿ:
ಜರ್ಮನಿ ಶೇ 35ರಷ್ಟು ಜನರು ಇಲ್ಲಿನ ಸರ್ಕಾರದ ಬಗ್ಗೆ ವಿಶ್ವಾಸಾರ್ಹತೆ ಹೊಂದಿದ್ದಾರೆ. ಇಲ್ಲಿನ ಸರ್ಕಾರದ ವಿಶ್ವಾಸಾರ್ಹತೆ ವರ್ಷದಿಂದ ವರ್ಷಕ್ಕೆ ಶೇ 7 ರಷ್ಟು ಕುಸಿತ ಕಾಣುತ್ತಿದೆ ಎಂದು ವರದಿ ಬಹಿರಂಗ ಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.