ADVERTISEMENT

ಜಾಗತಿಕ ರ‍್ಯಾಂಕಿಂಗ್‌ ಪಟ್ಟಿಗೆ ಬೆಂಗಳೂರಿನ 2 ಸಂಸ್ಥೆಗಳು

ಪಿಟಿಐ
Published 4 ಮಾರ್ಚ್ 2021, 22:21 IST
Last Updated 4 ಮಾರ್ಚ್ 2021, 22:21 IST

ನವದೆಹಲಿ: ‘ಕ್ಯೂಎಸ್‌ ವಲ್ಡ್‌ ಯೂನಿವರ್ಸಿಟಿ ರ‍್ಯಾಂಕಿಂಗ್‌’ನಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಇಂಡಿಯನ್‌ ಇನ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ) ಸೇರಿ ದೇಶದ 12 ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ.

‘ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತಂದಿರುವ ಸುಧಾರಣೆಗಳಿಂದಾಗಿ ದೇಶದ ಶೈಕ್ಷಣಿಕ ಸಂಸ್ಥೆಗಳು ಜಾಗತಿಕ ರ‍್ಯಾಂಕಿಂಗ್‌ ಪಡೆಯಲು ಸಾಧ್ಯವಾಗಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಗುರುವಾರ ಹೇಳಿದರು.

ರ‍್ಯಾಂಕಿಂಗ್‌ಗೆ ವಿವಿಧ ದೇಶಗಳ ಒಟ್ಟು 100 ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಬಾಂಬೆ, ದೆಹಲಿ, ಮದ್ರಾಸ್‌, ಖರಗಪುರ ಹಾಗೂ ಗುವಾಹಟಿ ಐಐಟಿಗಳು, ಐಐಎಂ–ಅಹಮದಾಬಾದ್‌, ಜವಾಹರಲಾಲ್‌ ನೆಹರೂ ವಿ.ವಿ., ಅಣ್ಣಾ ವಿ.ವಿ., ದೆಹಲಿ ವಿ.ವಿ. ಹಾಗೂ ಒ.ಪಿ.ಜಿಂದಾಲ್‌ ವಿ.ವಿ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ADVERTISEMENT

ಪೆಟ್ರೋಲಿಯಂ ಎಂಜಿನಿಯರಿಂಗ್‌ ವಿಭಾಗದಲ್ಲಿ ಐಐಟಿ–ಮದ್ರಾಸ್‌ 30ನೇ ರ‍್ಯಾಂಕ್‌ ಪಡೆದಿದೆ. ಮಿನರಲ್ಸ್‌ ಆ್ಯಂಡ್‌ ಮೈನಿಂಗ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಬಾಂಬೆ ಹಾಗೂ ಖರಗಪುರ ಐಐಟಿಗಳು ಕ್ರಮವಾಗಿ 41 ಹಾಗೂ 44ನೇ ರ‍್ಯಾಂಕ್‌ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.