ADVERTISEMENT

ವಿದೇಶಿಯರ ಕೈವಾಡದಿಂದ ಮೇಘಸ್ಫೋಟವಾಗಿರುವ ಬಗ್ಗೆ ಮಾಹಿತಿ ಇದೆ: ಕೆಸಿಆರ್‌

ಪಿಟಿಐ
Published 18 ಜುಲೈ 2022, 6:35 IST
Last Updated 18 ಜುಲೈ 2022, 6:35 IST
ಕೆ.ಚಂದ್ರಶೇಖರ ರಾವ್‌
ಕೆ.ಚಂದ್ರಶೇಖರ ರಾವ್‌    

ಹೈದರಾಬಾದ್‌: ಗೋದಾವರಿ ನದಿ ಜಲಾನಯನ ಪ್ರದೇಶ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಸಂಭವಿಸಿದ ಮೇಘಸ್ಫೋಟದ ಹಿಂದೆ ವಿದೇಶಿಯರ ಕೈವಾಡವಿರುವ ಎಂಬ ಶಂಕೆ ಇದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಭಾನುವಾರ ಹೇಳಿದ್ದಾರೆ.

ಭದ್ರಾದ್ರಿ-ಕೊತಗುಡಂ ಜಿಲ್ಲೆಯ ಪ್ರವಾಹ ಪೀಡಿತ ಭದ್ರಾಚಲಂಗೆ ಭೇಟಿ ನೀಡಿದ್ದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮೇಘಸ್ಫೋಟ (ಕ್ಲೌಡ್‌ಬರ್ಸ್ಟ್) ಎಂಬ ಹೊಸ ವಿಧಾನವೊಂದು ಈಗ ಬಂದಿದೆ. ಅದರ ಸುತ್ತಲೂ ಷಡ್ಯಂತ್ರಗಳಿವೆ ಎಂದು ಹಲವರು ಹೇಳುತ್ತಾರೆ. ಅದು ಎಷ್ಟು ಸತ್ಯ ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ. ಕೆಲವು ದೇಶಗಳು ಉದ್ದೇಶಪೂರ್ವಕವಾಗಿ ನಮ್ಮ ದೇಶದಲ್ಲಿ ಮೇಘಸ್ಫೋಟ ಉಂಟುಮಾಡುತ್ತಿವೆ. ಮೊದಲು ಲೇಹ್ (ಲಡಾಖ್) ನಲ್ಲಿ ಮಾಡಿದರು. ಆನಂತರ ಉತ್ತರಾಖಂಡದಲ್ಲೂ ಅದನ್ನೇ ಮಾಡಿದ್ದಾರೆ. ಗೋದಾವರಿ ಜಲಾನಯನ ಪ್ರದೇಶದಲ್ಲಿಯೂ ಅದೇ ಆಗಿದೆ ಎಂಬ ಬಗ್ಗೆ ನಮಗೆ ಅಸ್ಪಷ್ಟ ಮಾಹಿತಿಗಳಿವೆ. ಅದೇನೇ ಇದ್ದರೂ, ಹವಾಮಾನ ಬದಲಾವಣೆಯಿಂದಲೂ ಇಂಥ ಅನಾಹುತಗಳು ಸಂಭವಿಸುತ್ತವೆ. ಹೀಗಾಗಿ ನಾವು ನಮ್ಮ ಜನರನ್ನು ರಕ್ಷಿಸಿಕೊಳ್ಳಬೇಕಾಗಿದೆ’ ಎಂದು ಕೆಸಿಆರ್ ಹೇಳಿದ್ದಾರೆ.

ADVERTISEMENT

ನಿರಂತರ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಹವಾಮಾನ ಇಲಾಖೆ ಮತ್ತು ಕೆಲವು ಖಾಸಗಿ ಸಂಸ್ಥೆಗಳ ಎಚ್ಚರಿಕೆಯ ಪ್ರಕಾರ ಜುಲೈ 29 ರವರೆಗೆ ಈ (ಭಾರೀ ಮಳೆ) ಪರಿಸ್ಥಿತಿ ಮುಂದುವರಿಯಬಹುದು ಎನ್ನಲಾಗಿದೆ. ಆದ್ದರಿಂದ, ಅಪಾಯವು ಇನ್ನೂ ಮುಗಿದಿಲ್ಲ ಎಂದು ರಾವ್ ಹೇಳಿದರು.

ಅಧಿಕಾರಿಗಳೊಂದಿಗೆ ಪ್ರವಾಹ ಪರಿಹಾರ ಕ್ರಮಗಳನ್ನು ಕೆಸಿಆರ್‌ ಭಾನುವಾರ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.