ಪಣಜಿ: ಗೋವಾ ಕರಾವಳಿಯಲ್ಲಿ ಅಕ್ರಮ ಮೀನುಗಾರಿಕೆ ಚಟುವಟಿಕೆಗಳ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ರಾಜ್ಯದ ವಿಧಾನಸಭೆಯಲ್ಲಿ ಹೇಳಿದ್ದಾರೆ.
ವಿಷಯ ಪ್ರಸ್ತಾಪಿಸಿದ ಪಕ್ಷೇತರ ಶಾಸಕ ಅಲೆಕ್ಸೊ ರೆಜಿನಾಲ್ಡೊ, ‘ಬುಲ್ ಟ್ರಾಲಿಂಗ್’ ನಡೆಸುವವರು ಮತ್ತು ಕೆಲವು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ನಡುವೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.
‘ಬುಲ್ ಟ್ರಾಲಿಂಗ್’ ಎಂದರೆ, ಎರಡು ದೋಣಿಗಳಲ್ಲಿ ದೊಡ್ಡ ಬಲೆಗಳನ್ನು ಸಮುದ್ರಾಳದಲ್ಲಿ ಎಳೆದುಕೊಂಡು ನಡೆಸುವ ಮೀನುಗಾರಿಕೆಯಾಗಿದೆ. ಈ ಮಾದರಿಯ ಮೀನುಗಾರಿಕೆಯು ಸಮುದದ್ರಾಳಕ್ಕೆ ಹಾನಿ ಮಾಡುವುದಲ್ಲದೆ, ಮೀನುಗಳ ಸಂತಾನೋತ್ಪತ್ತಿಗೂ ಹಾನಿಕಾರಕವಾಗಿದೆ.
ಕರಾವಳಿ ಪೊಲೀಸರು ಇತ್ತಿಚೆಗೆ, 17 ಅಥವಾ 18 ದೋಣಿಗಳನ್ನು ವಶಕ್ಕೆ ಪಡೆದು, ಅದರಲ್ಲಿನ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಮುಂದೆ ಡ್ರೋನ್‌ಗಳನ್ನು ಕೂಡಾ ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಡ್ರೋನ್‌ಗಳು ಚಿತ್ರಗಳನ್ನು ಕ್ಲಿಕ್ಕಿಸಿ ಮೀನುಗಾರಿಕೆ ಇಲಾಖೆಗೆ ಪರಿಸ್ಥಿತಿಯ ಮೇಲೆ ನಿಗಾವಹಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.