ADVERTISEMENT

ಗೋವಾದಲ್ಲಿ ಜುಲೈ 30 ರೊಳಗೆ 18-44 ವಯಸ್ಸಿನ ಎಲ್ಲರಿಗೂ ಲಸಿಕೆ: ಪ್ರಮೋದ್ ಸಾವಂತ್

ಪಿಟಿಐ
Published 4 ಜೂನ್ 2021, 13:10 IST
Last Updated 4 ಜೂನ್ 2021, 13:10 IST
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್   

ಪಣಜಿ: ಜುಲೈ 30 ರೊಳಗೆ 18 ರಿಂದ 44 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಹಾಕುವ ಗುರಿಯನ್ನು ರಾಜ್ಯ ಹೊಂದಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಪಡೆಯಲು ನಾಗರಿಕರು ಸಹಕರಿಸಬೇಕು ಮತ್ತು ಚುಚ್ಚುಮದ್ದು ಪಡೆಯಬೇಕು. ಜುಲೈ 30ರೊಳಗೆ 18 ರಿಂದ 44 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಹಾಕುವ ಗುರಿಯನ್ನು ಗೋವಾ ಸರ್ಕಾರ ಹೊಂದಿದೆ' ಎಂದು ಅವರು ಹೇಳಿದರು.

'ಗೋವಾ ಶೇ 100 ರಷ್ಟು ವ್ಯಾಕ್ಸಿನೇಷನ್ (18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ) ಪೂರ್ಣಗೊಳಿಸಿದ ದೇಶದ ಮೊದಲ ರಾಜ್ಯವಾಗಬೇಕೆಂದು ನಾನು ಬಯಸುತ್ತೇನೆ' ಎಂದು ಸಾವಂತ್ ಹೇಳಿದರು.

ADVERTISEMENT

ಚಿಕ್ಕ ಮಕ್ಕಳನ್ನು ಹೊಂದಿರುವ ಪೋಷಕರು, ವಿಶೇಷ ಚೇತನರು, ಕಡಲತೀರದವರು, ಟ್ಯಾಕ್ಸಿ ಮತ್ತು ಆಟೋಗಳ ಚಾಲಕರಿಗೆ ಹಂತ ಹಂತವಾಗಿ ಲಸಿಕೆ ನೀಡಲು ರಾಜ್ಯವು ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

'ನಾವು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೋಷಕರಿಗೆ ಮತ್ತು ಕೊಮೊರ್ಬಿಡಿಟಿ (ಏಕಕಾಲದಲ್ಲಿ ರೋಗಿಯಲ್ಲಿ ಒಂದಕ್ಕಿಂತ ಹೆಚ್ಚು ಕಾಯಿಲೆ ಕಂಡುಬರುವುದು) ಪರಿಸ್ಥಿತಿ ಇರುವವರಿಗೆ ಗುರುವಾರ ಲಸಿಕೆ ಹಾಕಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ವರ್ಗದ ಅಡಿಯಲ್ಲಿ 1,300 ಜನರು ಮಾತ್ರ ಲಸಿಕೆ ಪಡೆದಿದ್ದಾರೆ ಎಂಬುದು ತಿಳಿದಿದೆ'. ಐದು ವರ್ಷ ವಯಸ್ಸಿನ ಮಕ್ಕಳ ಪೋಷಕರನ್ನು ಒಳಗೊಂಡ ರಾಜ್ಯ ಸರ್ಕಾರವು ಈಗ ಆದ್ಯತೆಯ ವರ್ಗಗಳ ಅಡಿಯಲ್ಲಿ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂದು ಅವರು ಹೇಳಿದರು.

ಜೂನ್ 7 ರಂದು ಕೊನೆಗೊಳ್ಳಲಿರುವ ರಾಜ್ಯವ್ಯಾಪಿ ಕರ್ಫ್ಯೂ ಬಗ್ಗೆ ಕೇಳಿದಾಗ, ಜೂನ್ 6 ರಂದು ಪರಿಶೀಲನಾ ಸಭೆ ನಡೆಸಲಿದ್ದೇವೆ ಎಂದ ಮುಖ್ಯಮಂತ್ರಿ, ಕರ್ಫ್ಯೂವನ್ನು ನಿರ್ಧರಿಸುವ ಮೊದಲು ನಾವು ಪರಿಸ್ಥಿತಿಯ ಅವಲೋಕನ ನಡೆಸಿ ಮಾಹಿತಿ ಸಂಗ್ರಹಿಸುತ್ತೇವೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.