ADVERTISEMENT

ನೀಟ್–ಯುಜಿ ಅಕ್ರಮ | ಗೋಧ್ರಾ ಆರೋ‍ಪಿಗಳಿಂದ ಪರೀಕ್ಷಾ ಕೇಂದ್ರಗಳ ನಿಯಂತ್ರಣ: ಸಿಬಿಐ

ದೋಷಾರೋಪಪಟ್ಟಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 20:36 IST
Last Updated 11 ಸೆಪ್ಟೆಂಬರ್ 2024, 20:36 IST
–
   

ಅಹಮದಾಬಾದ್‌: ‘ನೀಟ್‌–ಯುಜಿ’ ಅಕ್ರಮ ಪ್ರಕರಣದ ಆರೋಪಿಗಳು, ಗೋಧ್ರಾದ ಎರಡು ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು ಎಂದು ಸಿಬಿಐ ಹೇಳಿದೆ.

‘ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆ ಉಸ್ತುವಾರಿ ಸಿಬ್ಬಂದಿ, ಪರೀಕ್ಷಾ ಮೇಲ್ವಿಚಾರಕರು ಹಾಗೂ ಇತರ ಸಿಬ್ಬಂದಿಯನ್ನೂ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಆರೋಪಿಗಳು, ಭಾರಿ ಮೊತ್ತದ ಹಣ ಪಡೆದು ಅಭ್ಯರ್ಥಿಗಳ ಒಎಂಆರ್‌ ಉತ್ತರಪತ್ರಿಕೆಗಳನ್ನು ತಿರುಚಿದ್ದರು ಎಂಬುದು ಕೂಡ ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.

‘ಗೋಧ್ರಾದ ಈ ಶಾಲೆಗಳು ಆರೋಪಿಗಳ ಸಂಪೂರ್ಣ ನಿಯಂತ್ರಣದಲ್ಲಿ ಇದ್ದಿದ್ದು, ಅಭ್ಯರ್ಥಿಗಳು ಇಲ್ಲಿನ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ’ ಎಂದೂ ಹೇಳಿದೆ.

ADVERTISEMENT

‘ಗೋಧ್ರಾದ ಎರಡು ಶಾಲೆಗಳಲ್ಲಿ ಸ್ಥಾಪಿಸಲಾಗಿದ್ದ ಪರೀಕ್ಷಾ ಕೇಂದ್ರದ ಕನಿಷ್ಠ 30 ಅಭ್ಯರ್ಥಿಗಳು ಈ ಕ್ರಿಮಿನಲ್‌ ಪಿತೂರಿಯಲ್ಲಿ ಶಾಮೀಲಾಗಿದ್ದರು. ಬಿಹಾರದ ಮೂವರು, ಗೋಧ್ರಾದ 6, ಗುಜರಾತ್‌ನ ವಿವಿಧ ಜಿಲ್ಲೆಗಳ 8, ಮಹಾರಾಷ್ಟ್ರದ 4, ಒಡಿಶಾ–5, ರಾಜಸ್ಥಾನ–3 ಹಾಗೂ ಉತ್ತರ ಪ್ರದೇಶ ಒಬ್ಬ ಅಭ್ಯರ್ಥಿ ಈ ಪಿತೂರಿಯ ಭಾಗವಾಗಿದ್ದುದು ಕಂಡುಬಂದಿದೆ’ ಎಂದು ಸಿಬಿಐ ಹೇಳಿದೆ.

ಹಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಬಿಐ, ಈ ಎರಡು ಶಾಲೆಗಳನ್ನು ನಡೆಸುತ್ತಿರುವ ಜೈ ಜಲರಾಮ್ ಟ್ರಸ್ಟ್‌ ಮುಖ್ಯಸ್ಥ ದೀಕ್ಷಿತ್‌ ಪಟೇಲ್‌ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.