ADVERTISEMENT

ಪಶ್ಚಿಮ ಬಂಗಾಳ | ₹2.82 ಕೋಟಿ ಬೆಲೆಯ ಚಿನ್ನದ ಬಿಸ್ಕತ್‌ ವಶ

ಪಿಟಿಐ
Published 12 ಅಕ್ಟೋಬರ್ 2025, 13:25 IST
Last Updated 12 ಅಕ್ಟೋಬರ್ 2025, 13:25 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಭಾರತ– ಬಾಂಗ್ಲಾದೇಶ ಗಡಿ ಬಳಿ ಕಳ್ಳಸಾಗಣೆದಾರನನ್ನು ಬಂಧಿಸಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು, ಆತನಿಂದ ₹2.82 ಕೋಟಿ ಬೆಲೆಯ 20 ಚಿನ್ನದ ಬಿಸ್ಕತ್‌ಗಳನ್ನು ಶನಿವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ. 

ಸ್ಥಳೀಯ ನಿವಾಸಿಯೊಬ್ಬ ಬಾಂಗ್ಲಾದೇಶದಿಂದ ತಂದಿರುವ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಲು ಯೋಜಿಸಿದ್ದಾನೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಬಿಎಸ್‌ಎಫ್‌ನ 32ನೇ ಘಟಕ ಹೊರಾಂಡಿಪುರದಲ್ಲಿ ಕಾರ್ಯಾಚರಣೆ ನಡೆಸಿತು ಎಂದು ಅಧಿಕೃತ ಹೇಳಿಕೆಯಲ್ಲಿ  ತಿಳಿಸಲಾಗಿದೆ. 

ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.