ADVERTISEMENT

ಮಥುರಾ: ಹಳಿ ತಪ್ಪಿದ ಗೂಡ್ಸ್ ರೈಲು, ಸಂಚಾರಕ್ಕೆ ತೊಂದರೆ

ಪಿಟಿಐ
Published 22 ಜನವರಿ 2022, 14:57 IST
Last Updated 22 ಜನವರಿ 2022, 14:57 IST
ಉತ್ತರಪ್ರದೇಶದ ಮಥುರಾದಲ್ಲಿ ಶನಿವಾರ ಗಾಜಿಯಾಬಾದ್‌ಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ಮಥುರಾ–ದೆಹಲಿ ಮಾರ್ಗದಲ್ಲಿ ಹಳಿ ತಪ್ಪಿದ್ದು ಕಾರ್ಮಿಕರು ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು –ಪಿಟಿಐ ಚಿತ್ರ
ಉತ್ತರಪ್ರದೇಶದ ಮಥುರಾದಲ್ಲಿ ಶನಿವಾರ ಗಾಜಿಯಾಬಾದ್‌ಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ಮಥುರಾ–ದೆಹಲಿ ಮಾರ್ಗದಲ್ಲಿ ಹಳಿ ತಪ್ಪಿದ್ದು ಕಾರ್ಮಿಕರು ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು –ಪಿಟಿಐ ಚಿತ್ರ   

ಮಥುರಾ: ‘ವೃಂದಾವನದಿಂದ ಗಾಜಿಯಾಬಾದ್‌ಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ಹಳಿ ತಪ್ಪಿದ್ದು, ಮಥುರಾ ಮತ್ತು ದೆಹಲಿ ನಡುವೆ ರೈಲು ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘ಶುಕ್ರವಾರ ರಾತ್ರಿ 11.30ಕ್ಕೆ ಚಿತ್ತೂರು ನಿಂಬಾ ನಿಲ್ದಾಣದಿಂದ ಬರುತ್ತಿದ್ದ ರೈಲು ಹಳಿ ತಪ್ಪಿದ್ದರಿಂದ ಅನೇಕ ಬೋಗಿಗಳು ಹಳಿಯಿಂದ ಬದಿಗೆ ಸರಿದಿವೆ’ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

‘ಹಳಿ ತಪ್ಪಿದ್ದರಿಂದಾಗಿ ಎರಡೂ ಬದಿಗೆ ಸಂಚರಿಸುವ ಮಾರ್ಗಗಳು ಸೇರಿದಂತೆ ಮೂರನೇ ಮಾರ್ಗದ ಮೇಲೂ ಪರಿಣಾಮವುಂಟಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.ಸರಕು ಸಾಗಣೆ ರೈಲಿನಲ್ಲಿ ಸಿಮೆಂಟ್ ಚೀಲಗಳನ್ನು ಸಾಗಿಸಲಾಗುತ್ತಿತ್ತು. ಹಳಿತಪ್ಪಿದ ಬೋಗಿಗಳನ್ನು ತೆರವುಗೊಳಿಸಲು ಸುಮಾರು 300 ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಶೀಘ್ರದಲ್ಲೇ ರೈಲು ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಆಗ್ರಾ ವಿಭಾಗೀಯ ರೈ‌‌ಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಕೆ. ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.