ADVERTISEMENT

ಸಾಲ ತಂದು ಆರ್ಥಿಕತೆಗೆ ಜೀವ ತುಂಬಲಿ ಕೇಂದ್ರ ಸರ್ಕಾರ: ಚಿದಂಬರಂ

ಕೇಂದ್ರ ಸರ್ಕಾರಕ್ಕೆ ಚಿದಂಬರಂ ಸಲಹೆ   

ಪಿಟಿಐ
Published 6 ಸೆಪ್ಟೆಂಬರ್ 2020, 17:55 IST
Last Updated 6 ಸೆಪ್ಟೆಂಬರ್ 2020, 17:55 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ:ಕುಸಿದಿರುವ ದೇಶದ ಆರ್ಥಿಕತೆಗೆ ಜೀವ ತುಂಬಲು ಜಾಗತಿಕ ಹಣಕಾಸು ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ನಿಂದ ಹೆಚ್ಚೆಚ್ಚು ಸಾಲ ತರುವಂತೆಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.‌

ಆರ್ಥಿಕ ಚಟುವಟಿಕೆ ಉತ್ತೇಜಿಸಲು ಬೇಕಾಗುವ ಹಣವನ್ನು ವಿಶ್ವ ಬ್ಯಾಂಕ್‌, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ಏಷಿಯನ್ ಡೆವೆಲಪ್‌ಮೆಂಟ್‌ ಬ್ಯಾಂಕ್‌ನಿಂದ (ಎಡಿಬಿ)‌ ಹೆಚ್ಚು ಸಾಲ ಪಡೆಯಲುಕೇಂದ್ರ ಸರ್ಕಾರ ಹಿಂಜರಿಯ
ಬಾರದು ಎಂದು ಚಿದಂಬರಂ ಭಾನುವಾರಟ್ವೀಟ್‌ ಮಾಡಿದ್ದಾರೆ.

ಗ್ರಾಹಕರ ಬೇಡಿಕೆ ಹೆಚ್ಚಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು.ಇದರಿಂದ ಪಾತಾಳಕ್ಕೆ ಕುಸಿದಿರುವ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬಹುದು ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.