ನವದೆಹಲಿ: ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರು ಸಾಗಿಸಬಹುದಾದ ಬ್ಯಾಗೇಜ್ ತೂಕದ ಮಿತಿಯನ್ನು ತಾವೇ ನಿರ್ಧರಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಅನುಮತಿ ನೀಡಿದೆ.
ಕೊರೊನಾ – ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಮೇ 25ರಿಂದ ಪುನರಾಂಭಗೊಂಡಾಗ ಸಚಿವಾಲಯ ಒಬ್ಬ ಪ್ರಯಾಣಿಕರಿಗೆ ಒಂದು ಚೆಕ್ ಇನ್ ಬ್ಯಾಗ್ ಮತ್ತು ಮತ್ತೊಂದು ಹ್ಯಾಂಡ್ ಬ್ಯಾಗ್ ಕೊಂಡೊಯ್ಯಲು ಅನುಮತಿ ನೀಡಿತ್ತು.
ಸಚಿವಾಲಯದ ಗುರುವಾರ ಹೊರಡಿಸಿರುವ ಆದೇಶದಲ್ಲಿ ‘ಸರಕುಗಳ ಮಿತಿ ವಿಮಾನಯಾನ ಸಂಸ್ಥೆಯ ನಿಯಮಗಳಿಗೆ ಸಂಬಂಧಿಸಿದೆ‘ ಎಂದು ಹೇಳಿದೆ. ಈ ಮೂಲಕ ಬ್ಯಾಗೇಜ್ ಮಿತಿಯ ನಿರ್ಧಾರವನ್ನು ವಿಮಾನಯಾನ ಸಂಸ್ಥೆಗಳಿಗೆ ಬಿಟ್ಟುಕೊಟ್ಟಿದೆ.
‘ವಿವಿಧ ಪಾಲುದಾರ ಸಂಸ್ಥೆಗಳು ನೀಡಿದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಆಧರಿಸಿಚೆಕ್-ಇನ್ ಬ್ಯಾಗೇಜ್‌ಗೆ ಸಂಬಂಧಿಸಿದ ವಿಷಯವನ್ನು ಪರಿಶೀಲಿಸಲಾಗಿದೆ‘ ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.