ADVERTISEMENT

ಉದ್ಯೋಗಿಗಳಿಗೆ 5 ನಿಮಿಷದ ‘ಯೋಗ’ ವಿರಾಮ: ವಿವಿಧ ಇಲಾಖೆಗಳಿಗೆ ಕೇಂದ್ರ ಸೂಚನೆ

ಪಿಟಿಐ
Published 4 ಸೆಪ್ಟೆಂಬರ್ 2021, 15:39 IST
Last Updated 4 ಸೆಪ್ಟೆಂಬರ್ 2021, 15:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಇಲಾಖೆಗಳ ಉದ್ಯೋಗಿಗಳಿಗೆ ಕೆಲಸದ ಮಧ್ಯೆ ನಿತ್ಯವೂ ಐದು ನಿಮಿಷಗಳ ‘ಯೋಗ’ ವಿರಾಮ (ಬ್ರೇಕ್‌) ಅಥವಾ ‘ವೈ ಬ್ರೇಕ್’ ನೀಡುವಂತೆ ಸೂಚಿಸಿದೆ.

ಕೆಲಸದ ಸ್ಥಳದಲ್ಲಿ ಉದ್ಯೋಗಿಗಳು ದಣಿವಾರಿಸಿಕೊಂಡು ಉತ್ಸಾಹಭರಿತವಾಗಿ (ರಿಫ್ರೆಶ್‌) ಆಗಿ ಕೆಲಸ ಮಾಡುವ ಸಲುವಾಗಿ ಈ ವಿರಾಮ ನೀಡಬೇಕೆಂದು ಕೇಂದ್ರದ ಸಿಬ್ಬಂದಿ ಸಚಿವಾಲಯವು ತನ್ನ ಆದೇಶದಲ್ಲಿ ಸೂಚನೆ ನೀಡಿದೆ.

‘ವೈ ಬ್ರೇಕ್‌’ ಬಗ್ಗೆ ಕೆಲಸದ ಸ್ಥಳದಲ್ಲಿ ಉತ್ತೇಜನಕಾರಿಯಾದ ಪ್ರತಿಕ್ರಿಯೆ ದೊರೆತಿದೆ ಎಂದು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದ ಆಯುಷ್ ಸಚಿವಾಲಯವು ತಿಳಿಸಿದೆ. ಈ ಯಶಸ್ಸಿನ ಪರಿಣಾಮವಾಗಿ ಸಚಿವಾಲಯವು ಆ್ಯಂಡ್ರಾಯ್ಡ್ ಆಧಾರಿತ ‘ವೈ ಬ್ರೇಕ್’ ಅಪ್ಲಿಕೇಷನ್ ಅನ್ನೂ ಅಭಿವೃದ್ಧಿ ಪಡಿಸಿದ್ದು, ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.