ADVERTISEMENT

ವೆಂಟಿಲೇಟರ್ಸ್‌, ಮಾಸ್ಕ್‌: ಕಸ್ಟಮ್ಸ್‌ ಸುಂಕ ವಿನಾಯ್ತಿ

ಪಿಟಿಐ
Published 10 ಏಪ್ರಿಲ್ 2020, 4:13 IST
Last Updated 10 ಏಪ್ರಿಲ್ 2020, 4:13 IST

ನವದೆಹಲಿ: ಕೇಂದ್ರ ಸರ್ಕಾರವು ಕೊರೊನಾ ಸೋಂಕು ಪರೀಕ್ಷೆ ನಡೆಸುವ ಕಿಟ್‌ಗಳು, ವೆಂಟಿಲೇಟರ್‌ ಮೇಲಿನ ಕಸ್ಟಮ್ಸ್‌ ಸುಂಕ ಮತ್ತು ಆರೋಗ್ಯ ಸೆಸ್‌ ಅನ್ನು ಸೆಪ್ಟೆಂಬರ್‌ವರೆಗೂ ಕೈಬಿಟ್ಟಿದೆ.

ಈ ನಿರ್ಧಾರದಿಂದಾಗಿ, ಫೇಸ್‌ ಮತ್ತು ಸರ್ಜಿಕಲ್‌ ಮಾಸ್ಕ್‌ ಒಳಗೊಂಡು ಕೊರೊನಾ ಸೋಂಕಿನ ವಿರುದ್ಧ ರಕ್ಷಣೆ ಪಡೆಯುವ ಸಾಧನಗಳ ದರದಲ್ಲಿ ಇಳಿಕೆ ಆಗಲಿದೆ. ಇವುಗಳ ತಯಾರಿಕೆಗೆ ಬಳಸುವ ಕಚ್ಚಾ ಸಾಮಗ್ರಿಗಳಿಗೂ ಈ ವಿನಾಯ್ತಿ ಅನ್ವಯಿಸಲಿದೆ ಎಂದು ರೆವಿನ್ಯೂ ಇಲಾಖೆ ತಿಳಿಸಿದೆ.

ಸದ್ಯ ವೆಂಟಿಲೇಟರ್ಸ್‌ಗೆ ಶೇ 10ರಷ್ಟು, ಟೆಸ್ಟ್‌ ಕಿಟ್ಸ್‌ಗೆ ಶೇ 7.5ರಷ್ಟು ಸುಂಕ ಇದೆ. ಫೇಸ್‌ ಮತ್ತು ಸರ್ಜಿಕಲ್‌ ಮಾಸ್ಕ್‌ಗಳಿಗೆ ಶೇ 7.5ರಷ್ಟು ಹಾಗೂ ಪಿಪಿಇಗೆ ಶೇ 7.5ರಿಂದ ಶೇ 10ರವರೆಗೆ ಕಸ್ಟಮ್ಸ್‌ ಸುಂಕ ಇದೆ. ಈ ಎಲ್ಲಾ ಉತ್ಪನ್ನಗಳ ಮೇಲೆ ಆರೋಗ್ಯ ಸೆಸ್‌ ಶೇ 5ರಷ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.