ADVERTISEMENT

ಬೂಸ್ಟರ್‌ ಡೋಸ್‌ ಆಗಿ ‘ಕೊವಾವ್ಯಾಕ್ಸ್‌’: ಮಾರುಕಟ್ಟೆ ಅನುಮತಿಗೆ ಶಿಫಾರಸು

ಪಿಟಿಐ
Published 12 ಜನವರಿ 2023, 14:41 IST
Last Updated 12 ಜನವರಿ 2023, 14:41 IST
.
.   

ನವದೆಹಲಿ: ಕೋವಿಶೀಲ್ಡ್‌ ಅಥವಾ ಕೊವ್ಯಾಕ್ಸಿನ್‌ ಕೋವಿಡ್‌ ಲಸಿಕೆಗಳ ಎರಡು ಡೋಸ್‌ ಪಡೆದ ವಯಸ್ಕರಿಗೆ ಬೂಸ್ಟರ್‌ ಡೋಸ್‌ ಆಗಿ ಸೀರಂ ಸಂಸ್ಥೆ ತಯಾರಿಸಿರುವ ‘ಕೊವಾವ್ಯಾಕ್ಸ್‌’ ಅನ್ನು ಬಳಕೆ ಮಾಡಲು ಮಾರುಕಟ್ಟೆ ಅನುಮತಿಗೆ ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಗುರುವಾರ ಶಿಫಾರಸು ಮಾಡಿದೆ.

ಕೆಲವು ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಕೊವಾವ್ಯಾಕ್ಸ್‌ ಅನ್ನು ಬೂಸ್ಟರ್‌ ಡೊಸ್‌ ಆಗಿ ಬಳಸಲು ಅನುಮತಿ ಕೋರಿ ಸೀರಂ ಸಂಸ್ಥೆಯ ನಿರ್ದೇಶಕ ಪ್ರಕಾಶ್‌ ಕುಮಾರ್‌ ಸಿಂಗ್‌ ಅವರು ಈಚೆಗೆ ಭಾರತೀಯ ಔಷಧಿ ಮಹಾ ನಿಯಂತ್ರಕರಿಗೆ (ಡಿಸಿಜಿಎ) ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT