ADVERTISEMENT

8000 ‘ಲಿಂಕ್ಸ್‌’ಗಳ ವಿರುದ್ಧ ಕ್ರಮ: ಸಚಿವ ಧೋತ್ರೆ

ಪಿಟಿಐ
Published 4 ಮಾರ್ಚ್ 2020, 18:42 IST
Last Updated 4 ಮಾರ್ಚ್ 2020, 18:42 IST

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ 2018 ಮತ್ತು 2019ನೇ ಸಾಲಿನಲ್ಲಿ 8,000 ‘ಲಿಂಕ್ಸ್‌’ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ದೇಶದ ಭದ್ರತೆ, ಸಾರ್ವಭೌಮತ್ವ ಕಾಪಾಡಲು ಹಾಗೂ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿಕಾಯ್ದೆಯ 69ಎ ಸೆಕ್ಷನ್‌ನಡಿ ಸರ್ಕಾರಕ್ಕಿರುವ ಅಧಿಕಾರ ಬಳಸಿಕೊಂಡು, ಈ ಕ್ರಮ ಕೈಗೊಳ್ಳಲಾಗಿದೆ.

‘2018 ಹಾಗೂ 2019ರಲ್ಲಿ (ಆಗಸ್ಟ್‌ವರೆಗೆ) ಕ್ರಮವಾಗಿ 4,192 ಹಾಗೂ 3,847 ಯುಆರ್‌ಎಲ್‌ಗಳನ್ನು (ಯುನಿಫಾರ್ಮ್‌ ರಿಸೋರ್ಸ್‌ ಲೊಕೇಟರ್ಸ್‌) ನಿಷೇಧಿಸುವಂತೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ದೂರುಗಳು ದಾಖಲಾಗಿದ್ದವು. ಇದನ್ನು ಪರಿಗಣಿಸಿ ಕಾಯ್ದೆಯಡಿ ನೀಡಿರುವ ಅಧಿಕಾರ ಬಳಸಿಕೊಂಡು ಯುಆರ್‌ಎಲ್‌ಗಳನ್ನು ನಿಷೇಧಿಸಲಾಗಿದೆ’ ಎಂದು ಇಲಾಖೆಯ ಸಚಿವರಾದ ಸಂಜಯ್‌ ಧೋತ್ರೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ADVERTISEMENT

‘ದೇಶದ ನಾಗರಿಕರ ವೈಯಕ್ತಿಕ ಡೇಟಾ ರಕ್ಷಣೆಗಾಗಿ ಮಸೂದೆ ತರುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದ್ದು, ಸಂಸತ್‌ನಲ್ಲಿ ಮಂಡಿಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.