ADVERTISEMENT

ಬಿಐಎಸ್‌ಗೆ 2,500 ಉತ್ಪನ್ನ ಸೇರ್ಪಡೆ ಗುರಿ: ಕೇಂದ್ರ ಸಚಿವ ಪೀಯೂಷ್‌ ಗೋಯಲ್‌

ಪಿಟಿಐ
Published 6 ಜನವರಿ 2024, 15:44 IST
Last Updated 6 ಜನವರಿ 2024, 15:44 IST
<div class="paragraphs"><p>ಸಚಿವ ಪೀಯೂಷ್‌ ಗೋಯಲ್‌</p></div>

ಸಚಿವ ಪೀಯೂಷ್‌ ಗೋಯಲ್‌

   

ನವದೆಹಲಿ: ‘ಉತ್ಪನ್ನಗಳು ಮತ್ತು ಸೇವೆಯಲ್ಲಿ ಉತ್ಕೃಷ್ಟ ಗುಣಮಟ್ಟ ಕಾಯ್ದುಕೊಂಡರೆ ಮಾತ್ರ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್‌ ಗೋಯಲ್‌ ಪ್ರತಿಪಾದಿಸಿದ್ದಾರೆ.

ಭಾರತೀಯ ಗುಣಮಟ್ಟ ಮಾಪನ ಸಂಸ್ಥೆಯ (ಬಿಐಎಸ್‌) 77ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವರ್ಚುವಲ್ ಆಗಿ ಮಾತನಾಡಿದ ಅವರು, ‘2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಹಲವು ಉತ್ಪನ್ನಗಳನ್ನು ಬಿಐಎಸ್‌ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು. 

ADVERTISEMENT

2014ಕ್ಕೂ ಮೊದಲು ದೇಶದಲ್ಲಿ 106 ಉತ್ಪನ್ನಗಳಷ್ಟೇ ಬಿಐಎಸ್‌ ಮಾನದಂಡಕ್ಕೆ ಒಳಪಟ್ಟಿದ್ದವು. ಸದ್ಯ 672 ಉತ್ಪನ್ನಗಳು ಈ ಮಾನದಂಡಕ್ಕೆ ಒಳಪಟ್ಟಿವೆ. ಮುಂದಿನ ದಿನಗಳಲ್ಲಿ 2,000ದಿಂದ 2,500 ಉತ್ಪನ್ನಗಳನ್ನು ಇದರ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.