ADVERTISEMENT

ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಜಾನುವಾರು ಗಣತಿಗೆ ಸಿದ್ಧತೆ

ಪಿಟಿಐ
Published 8 ಫೆಬ್ರುವರಿ 2024, 14:16 IST
Last Updated 8 ಫೆಬ್ರುವರಿ 2024, 14:16 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಪ್ರಸಕ್ತ ವರ್ಷದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ ನಡುವೆ 21ನೇ ರಾಷ್ಟ್ರೀಯ ಜಾನುವಾರು ಗಣತಿ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಪಶುಪಾಲನಾ ಮತ್ತು ಹೈನುಗಾರಿಕೆ ಸಚಿವಾಲಯವು ಈ ಗಣತಿ ನಡೆಸಲಿದೆ. ಮೊಬೈಲ್‌ ಬಳಸಿಕೊಂಡು ದತ್ತಾಂಶ ಸಂಗ್ರಹಿಸಲಾಗುತ್ತದೆ. ಇದರಿಂದ ಆನ್‌ಲೈನ್‌ಗೆ ದತ್ತಾಂಶವನ್ನು ಸುಲಭವಾಗಿ ರವಾನಿಸಲು ಅನುಕೂಲವಾಗಲಿದೆ ಎಂದು ತಿಳಿಸಿದೆ.

ADVERTISEMENT

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಗಣತಿ ನಡೆಯಲಿದೆ. ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ, ಹೇಸರಗತ್ತೆ, ಕತ್ತೆ, ಒಂಟೆ, ನಾಯಿ, ಮೊಲ, ಸಾಕಾನೆಗಳ ಎಣಿಕೆ ನಡೆಯಲಿದೆ. ಕೋಳಿ, ಬಾತುಕೋಳಿ ಸೇರಿದಂತೆ ಕುಕ್ಕುಟ ವಿಭಾಗದಲ್ಲಿರುವ ಪಕ್ಷಿಗಳ ಎಣಿಕೆ ನಡೆಯಲಿದೆ. ಜಾನುವಾರು ಮತ್ತು ಪಕ್ಷಿಗಳ ತಳಿ, ಲಿಂಗ ಮತ್ತು ವಯಸ್ಸನ್ನು ದಾಖಲಿಸಲಾಗುತ್ತದೆ.

ಸಚಿವಾಲಯದ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ ಗಣತಿಯ ಸಿದ್ಧತೆ ಕುರಿತು ಗುರುವಾರ ಸಭೆ ನಡೆಯಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಹಿರಿಯ ಅಧಿಕಾರಿಗಳು ಮತ್ತು ತಾಂತ್ರಿಕ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.