ADVERTISEMENT

ಆಮ್ಲಜನಕ: ಕೈಗಾರಿಕೆಗಳ ಬಳಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಚಿಂತನೆ

ಪಿಟಿಐ
Published 2 ಮೇ 2021, 16:29 IST
Last Updated 2 ಮೇ 2021, 16:29 IST
ಆಮ್ಲಜನಕ ಉತ್ಪಾದನೆ (ಸಾಂದರ್ಭಿಕ ಚಿತ್ರ)
ಆಮ್ಲಜನಕ ಉತ್ಪಾದನೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ಆಮ್ಲಜನಕ ಉತ್ಪಾದಿಸುವ ಕೈಗಾರಿಕೆಗಳ ಬಳಿಯೇ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಅಗತ್ಯವಿರುವಷ್ಟು ಶುದ್ಧತೆಯ ಆಮ್ಲಜನಕ ತಕ್ಷಣವೇ ಕೋವಿಡ್‌–19 ರೋಗಿಗಳಿಗೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಇಂಥ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತದೆ. ಇಂಥ ಆಸ್ಪತ್ರೆಗಳಲ್ಲಿ ಒಟ್ಟು 10,000 ಹಾಸಿಗೆಗಳು ಇರಲಿದ್ದು, ಪ್ರತಿ ಹಾಸಿಗೆಯೂ ಆಮ್ಲಜನಕ ಪೂರೈಕೆ ಸೌಲಭ್ಯ ಹೊಂದಿರಲಿದೆ ಎಂದು ಮೂಲಗಳು ಹೇಳಿವೆ.

ಕೋವಿಡ್‌–19 ಪರಿಸ್ಥಿತಿ ಪರಾಮರ್ಶಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯ ಬಳಿಕ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಲಾಗಿದೆ.

ADVERTISEMENT

ಪ್ರಾಯೋಗಿಕವಾಗಿ ಇಂಥ ತಾತ್ಕಾಲಿಕ ಆಸ್ಪತ್ರೆಗಳ ಸ್ಥಾಪನೆಗೆ ಐದು ಸ್ಥಳಗಳನ್ನು ಸರ್ಕಾರ ಗುರುತಿಸಿದೆ.

ದೇಶದ ವಿವಿಧೆಡೆ ಸಾರಜನಕ ಉತ್ಪಾದಿಸುವ ಘಟಕಗಳಿದ್ದು, ಅವುಗಳನ್ನು ಆಮ್ಲಜನಕ ಉತ್ಪಾದನಾ ಘಟಕಗಳನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಉಕ್ಕು ಕಾರ್ಖಾನೆಗಳು, ತೈಲ ಸಂಸ್ಕರಣೆ ಘಟಕಗಳಿರುವ ಪೆಟ್ರೋಕೆಮಿಕಲ್‌ ಉದ್ದಿಮೆಗಳು, ವಿದ್ಯುತ್‌ ಉತ್ಪಾದನಾ ಸ್ಥಾವರಗಳನ್ನು ಸಹ ಪ್ರಾಣವಾಯುವಿನ ಉತ್ಪಾದನೆಗೆ ಬಳಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.