ADVERTISEMENT

ಬೋಡೊಲ್ಯಾಂಡ್‌: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಜ್ಜು

ಪಿಟಿಐ
Published 25 ಜನವರಿ 2020, 19:42 IST
Last Updated 25 ಜನವರಿ 2020, 19:42 IST

ನವದೆಹಲಿ:ಪ್ರತ್ಯೇಕ ಬೊಡೊಲ್ಯಾಂಡ್‌ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಬೇಡಿಕೆ ಹೊಂದಿರುವ ಅಸ್ಸಾಂನ ನ್ಯಾಷನಲ್‌ ಡೆಮಾಕ್ರೆಟಿಕ್ ಫ್ರಂಟ್‌ ಆಫ್‌ ಬೋಡೊಲ್ಯಾಂಡ್‌ (ಎನ್‌ಡಿಎಫ್‌ಬಿ) ಜತೆ ಕೇಂದ್ರ ಸರ್ಕಾರ ಸೋಮವಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿದೆ.

ಈ ಮೂಲಕ ಆ ಭಾಗಕ್ಕೆ ರಾಜಕೀಯ ಮತ್ತು ಆರ್ಥಿಕ ಕೊಡುಗೆಗಳನ್ನು ನೀಡುವ ಮಹತ್ವದ ಉದ್ದೇಶವನ್ನು ಕೇಂದ್ರ ಹೊಂದಿದೆ.‌

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಅಸ್ಸಾಂನ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಅವರ ಸಮ್ಮುಖದಲ್ಲಿ ಎನ್‌ಡಿಎಫ್‌ಬಿಯ ನಾಲ್ಕು ಬಣಗಳ ನಾಯಕರು, ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯೇಂದ್ರ ಗಾರ್ಗ್‌ ಮತ್ತು ಅಸ್ಸಾಂ ಮುಖ್ಯ ಕಾರ್ಯದರ್ಶಿ ಕುಮಾರ್‌ ಸಂಜಯ್‌ ಕೃಷ್ಣನ್‌ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ADVERTISEMENT

‘ಈ ಒಪ್ಪಂದವು ಬೋಡೊ ಬುಡಕಟ್ಟು ಜನರಿಗೆ ಅಸ್ಸಾಂನಲ್ಲಿ ಕೆಲ ರಾಜಕೀಯ ಹಕ್ಕುಗಳನ್ನು ನೀಡುವುದರ ಜತೆಗೆ ಸಮುದಾಯದ ಪ್ರಗತಿಗೆ ಕೆಲ ಆರ್ಥಿಕ ಪ್ಯಾಕೇಜ್‌ಗಳನ್ನು ನೀಡಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಅಸ್ಸಾಂನ ಪ್ರಾದೇಶಿಕ ಸಮಗ್ರತೆಯನ್ನು ಈ ಒಪ್ಪಂದ ಉಳಿಸಿಕೊಳ್ಳುತ್ತದೆ’ ಎಂದಿರುವ ಅವರು, ‘ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಎನ್‌ಡಿಎಫ್‌ಬಿಯ ಪ್ರಮುಖ ಬೇಡಿಕೆಗೆ ಮನ್ನಣೆ ದೊರೆಯುವುದಿಲ್ಲ’ ಎಂದಿದ್ದಾರೆ. ‘ರಾಜ್ಯವನ್ನು ವಿಭಜಿಸದೆ ಸಂವಿಧಾನದ ಚೌಕಟ್ಟಿನೊಳಗೆ ಈ ಒಪ್ಪಂದ‌ ಮಾಡಿಕೊಳ್ಳಲಾಗುತ್ತದೆ’ ಎಂದು ಇನ್ನೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.