ADVERTISEMENT

ಏಕರೂಪದ ಟೋಲ್ ಜಾರಿಗೆ ಚಿಂತನೆ: ನಿತಿನ್‌ ಗಡ್ಕರಿ

ಪಿಟಿಐ
Published 3 ಫೆಬ್ರುವರಿ 2025, 15:08 IST
Last Updated 3 ಫೆಬ್ರುವರಿ 2025, 15:08 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಅನುಕೂಲಕ್ಕಾಗಿ ಏಕರೂಪದ ಟೋಲ್‌ ನೀತಿ ಜಾರಿಗೆ ತರಲು ರಸ್ತೆ ಸಾರಿಗೆ ಸಚಿವಾಲಯ ಕಾರ್ಯನಿರತವಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸೋಮವಾರ ತಿಳಿಸಿದರು.

ಸದ್ಯ ಭಾರತದ ಮೂಲಸೌಕರ್ಯಗಳು ಅಮೆರಿಕಕ್ಕೆ ಸರಿಹೊಂದುವಂತಿದೆ ಎಂದು ಅವರು ಹೇಳಿದರು.

‘ಪಿಟಿಐ’ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆಯ ಸ್ಥಿತಿಗತಿ ಬಗ್ಗೆ ವ್ಯಕ್ತಪಡಿಸುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಆಯಾ ರಸ್ತೆಗಳ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನಗಳ ಪೈಕಿ ಖಾಸಗಿ ಕಾರುಗಳ ಪಾಲು ಶೇ 60ರಷ್ಟು. ಈ ವಾಹನಗಳಿಂದ ಸಂಗ್ರಹವಾಗುವ ಟೋಲ್‌ ಕೇವಲ ಶೇ 20–26ರಷ್ಟು ಮಾತ್ರ ಎಂದರು.

ಪ್ರತಿ ದಿನ 37 ಕಿ.ಮೀ ಹೆದ್ದಾರಿ ನಿರ್ಮಿಸುವ ಈ ಹಿಂದಿನ ದಾಖಲೆಯನ್ನು ಸಚಿವಾಲಯವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರಿಗಟ್ಟಲಿದೆ ಎಂದು ಗಡ್ಕರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ 7,000 ಕಿ.ಮೀ ಹೆದ್ದಾರಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಫೆಬ್ರುವರಿ–ಮಾರ್ಚ್‌ ಅವಧಿಯಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಹೆಚ್ಚಾಗಿ ನಡೆಯುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.