ADVERTISEMENT

ಹೊಸ ಮತದಾರರ ದಾಖಲಾತಿ: ಆಧಾರ್‌ ಬಳಕೆಗೆ ಯುಐಡಿಎಐಗೆ ಕೇಂದ್ರ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2021, 3:30 IST
Last Updated 8 ಆಗಸ್ಟ್ 2021, 3:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೊಸ ಮತದಾರರ ದಾಖಲಾತಿಗೆ ಆಧಾರ್‌ ಕಾರ್ಡ್‌ ಬಳಕೆ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ(ಯುಐಡಿಎಐ)ಕ್ಕೆ ಮನವಿ ಮಾಡಿದೆ.

ಆಧಾರ್‌ ಕಾರ್ಡ್‌ನಿಂದ ವಿಳಾಸ ಬದಲಾವಣೆಯಂತಹ ಇತರ ಸೇವೆಗಳು ವೇಗವಾಗಿ ನಡೆಯುತ್ತವೆ ಎಂದು ಕಾನೂನು ಸಚಿವಾಲಯ ಸಲಹೆ ನೀಡಿದೆ. 2020ರ 'ಉತ್ತಮ ಆಡಳಿತಕ್ಕೆ ಆಧಾರ್‌ ದೃಢೀಕರಣ ನೀತಿ 3'ರ ಅಡಿಯಲ್ಲಿ ಇ-ಇಪಿಐಸಿ(ವಿದ್ಯುನ್ಮಾನ ಮತದಾರರ ಭಾವಚಿತ್ರದ ಗುರುತಿನ ಚೀಟಿ) ಅಥವಾ ಮತದಾರರ ಚೀಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಮಾಹಿತಿ ಸಚಿವಾಲಯವು ಕಳೆದ ವರ್ಷ ಆಗಸ್ಟ್‌ 5ರಲ್ಲಿ, 'ಉತ್ತಮ ಆಡಳಿತ, ಸಾರ್ವಜನಿಕ ನಿಧಿ ಸೋರಿಕೆ ತಡೆ, ನಾಗರಿಕರ ಬದುಕಿನ ಸರಳೀಕರಣ, ಸುಲಲಿತ ಸೇವೆಗಳನ್ನು ಒದಗಿಸಲು ಆಧಾರ್‌ ದೃಢೀಕರಣ ಅಗತ್ಯ' ಎಂದು ಪ್ರತಿಪಾದಿಸಿತ್ತು.

ADVERTISEMENT

ಇದೀಗ ಕೇಂದ್ರ ಸರ್ಕಾರ ನೂತನ ಮತದಾರರ ದಾಖಲಾತಿಗೆ ಆಧಾರ್‌ ದೃಢೀಕರಣಕ್ಕೆ ಅವಕಾಶ ನೀಡಬೇಕು ಎಂದು ಯುಐಡಿಎಐಗೆ ಪತ್ರ ಬರೆದಿದೆ ಎಂದು 'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.