ADVERTISEMENT

ಶ್ರೀನಗರದಲ್ಲಿ ಗ್ರೆನೆಡ್‌ ದಾಳಿ: ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 5:56 IST
Last Updated 7 ಮಾರ್ಚ್ 2022, 5:56 IST
ಗ್ರೆನೆಡ್ ದಾಳಿಯಲ್ಲಿ ಗಾಯಗೊಂಡ ನಾಗರಿಕನನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸಿಬ್ಬಂದಿ: ಪಿಟಿಐ ಚಿತ್ರ
ಗ್ರೆನೆಡ್ ದಾಳಿಯಲ್ಲಿ ಗಾಯಗೊಂಡ ನಾಗರಿಕನನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸಿಬ್ಬಂದಿ: ಪಿಟಿಐ ಚಿತ್ರ   

ಶ್ರೀನಗರ: ಇಲ್ಲಿನ ಲಾಲ್‌ಚೌಕ್‌ ಸಮೀಪದ ಹರಿಸಿಂಗ್‌ ಹೈ ಸ್ಟ್ರೀಟ್‌ನಲ್ಲಿ ಭಾನುವಾರ ಸಂಜೆ ಉಗ್ರರು ನಡೆಸಿದ ಗ್ರೆನೆಡ್‌ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಯುವತಿಯೊಬ್ಬರು ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ರಫಿಯಾ( 20) ಮೃತಪಟ್ಟವರು. ‘ಗ್ರೆನೆಡ್‌ ದಾಳಿಯಲ್ಲಿ ಗಾಯಗೊಂಡು ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ ರಫಿಯಾ ಸೋಮವಾರ ಮುಂಜಾನೆ ಮೃತಪಟ್ಟರು’ ಎಂದು ಶ್ರೀನಗರದ ಎಸ್‌ಎಂಎಚ್‌ಎಸ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕವಲ್‌ಜಿತ್‌ ಸಿಂಗ್‌ ತಿಳಿಸಿದರು.

ವಾರಾಂತ್ಯದ ಮಾರುಕಟ್ಟೆಯಿಂದಾಗಿ ಜನ ಜಂಗುಳಿಯಿಂದ ಕೂಡಿದ್ದ ಹರಿಸಿಂಗ್‌ ಸ್ಟ್ರೀಟ್‌ನಲ್ಲಿ ಭಾನುವಾರ ಸಂಜೆ ನಡೆದ ಗ್ರೆನೆಡ್‌ ದಾಳಿಯಲ್ಲಿ 70 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 34 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಶ್ರೀನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.