ಭೋಪಾಲ್: ಮದುವೆ ಮಾಡಿಕೊಳ್ಳಲು ಸಂಭ್ರಮದಿಂದ ಹೊರಟಿದ್ದ ವರನಿಗೆ ಕೋವಿಡ್ ಪಾಸಿಟಿವ್ ಆಗಿರುವ ಪ್ರಕರಣ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಠಿಣ ಮಾರ್ಗಸೂಚಿ ನಡುವೆಯೂ ವರ ಮತ್ತು ಆತನ ಸಂಬಂಧಿಕರು ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದರು. ಮಧ್ಯದಾರಿಯಲ್ಲಿ ಪೊಲೀಸರು ವಾಹನನ್ನ್ಳು ತಡೆದ ಎಲ್ಲರಿಗೂ ಆಂಟಿಜೆನ್ ಟೆಸ್ಟ್ ನಡೆಸಿದ್ದಾರೆ. ಪರೀಕ್ಷೆ ವೇಳೆ, ವರ ಮತ್ತು ಆತನ ಕಾರಿನ ಡ್ರೈವರ್‌ಗೆ ಕೋವಿಡ್ ಪಾಸಿಟಿವ್ ಆಗಿರುವುದು ಕಂಡು ಬಂದಿದೆ. ಮದುವೆಗೆ ಸಿದ್ಧನಾಗಿದ್ದ ವರನನ್ನು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು, ಕಠಿಣ ಮಾರ್ಗಸೂಚಿ ನಡುವೆ ಮದುವೆ ಕಾರ್ಯಕ್ರಮ ಆಯೋಜಿಸಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
SHOW MORE
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.