ಶ್ರೀಹರಿಕೋಟ: ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್-03 ಅನ್ನು ಗುರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ತಿಳಿಸಿದೆ.
51.70 ಮೀಟರ್ ಉದ್ದದ ಜಿಎಸ್ಎಲ್ವಿ-ಎಫ್10 ರಾಕೆಟ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದಬೆಳಗ್ಗೆ05.43ಕ್ಕೆ ಸರಿಯಾಗಿ ಉಡಾವಣೆಗೊಂಡಿತು.
ಮೇಘಸ್ಫೋಟ ಸೇರಿದಂತೆ, ಕೃಷಿ, ಅರಣ್ಯ, ಜಲಮೂಲಗಳು,ನೈಸರ್ಗಿಕ ವಿಕೋಪಗಳ ಮೇಲ್ವಿಚಾರಣೆಗೆನೆರವಾಗುವಂತೆ ದೇಶದ ನೈಜ ಸಮಯದ ಚಿತ್ರಗಳನ್ನು ಸಂಗ್ರಹಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ10 ವರ್ಷಗಳವರೆಗೆ ಮುಂದುವರಿಯಲಿದೆ ಎಂದು ಇಸ್ರೋ ಹೇಳಿದೆ.
ಈ ವರ್ಷದ ಎರಡನೇ ಉಡಾವಣೆ ಇದಾಗಿದ್ದು, ಫೆಬ್ರುವರಿಯಲ್ಲಿ ಬ್ರೆಜಿಲ್ನ ಭೂ ಪರಿವೀಕ್ಷಣಾ ಉಪಗ್ರಹ ಅಮೇಜಾನಿಯಾ-1 ಮತ್ತು 18 ಅನ್ನು ಉಡಾವಣೆ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.