ಹೆಲಿಕಾಪ್ಟರ್
(ರಾಯಿಟರ್ಸ್ ಸಾಂದರ್ಭಿಕ ಚಿತ್ರ)
ನವದೆಹಲಿ: ಧಾರ್ಮಿಕ ಉದ್ದೇಶದ ಪ್ರಯಾಣಗಳಿಗೆ ಹೆಲಿಕಾಪ್ಟರ್ ಸೇವೆ ಬಳಸಿಕೊಳ್ಳುವುದಕ್ಕೆ ವಿಧಿಸುವ ತೆರಿಗೆಯ ಪ್ರಮಾಣವನ್ನು ಶೇಕಡ 5ಕ್ಕೆ ಇಳಿಸುವುದಕ್ಕೆ ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡಿದೆ ಎಂದು ಉತ್ತರಾಖಂಡದ ಹಣಕಾಸು ಸಚಿವ ಪ್ರೇಮಚಂದ್ ಅಗರ್ವಾಲ್ ತಿಳಿಸಿದ್ದಾರೆ.
‘ಕೇದಾರನಾಥ, ಬದರಿನಾಥದಂತಹ ಸ್ಥಳಗಳಿಗೆ ಕೈಗೊಳ್ಳುವ ಧಾರ್ಮಿಕ ಪ್ರಯಾಣಗಳಿಗೆ ಹೆಲಿಕಾಪ್ಟರ್ ಸೇವೆ ಪಡೆದಾಗ ಅದಕ್ಕೆ ವಿಧಿಸುವ ತೆರಿಗೆಯ ಪ್ರಮಾಣವು ಈಗ ಶೇ 18ರಷ್ಟು ಇದೆ. ಇನ್ನು ಮುಂದೆ ಅದು ಶೇ 5ರಷ್ಟು ಆಗಲಿದೆ. ಈ ವಿಚಾರವಾಗಿ ಇದುವರೆಗೆ ಸ್ಪಷ್ಟತೆ ಇರಲಿಲ್ಲ. ಇನ್ನು ಮುಂದೆ ಸ್ಪಷ್ಟತೆ ಇರಲಿದೆ’ ಎಂದು ಅಗರ್ವಾಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.