ADVERTISEMENT

ಕಾನ್‌ಸ್ಪೆಬಲ್‌ಗೆ ಬೆದರಿಕೆ: ಸಚಿವರ ಮಗನ ಬಂಧನ, ಬಿಡುಗಡೆ

ಪಿಟಿಐ
Published 12 ಜುಲೈ 2020, 12:14 IST
Last Updated 12 ಜುಲೈ 2020, 12:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೂರತ್‌: ಲಾಕ್‌ಡೌನ್‌ ಮತ್ತು ರಾತ್ರಿ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಗುಜರಾತ್‌ ಸಚಿವರ ಮಗ ಮತ್ತು ಅವರ ಸ್ನೇಹಿತರನ್ನು ಭಾನುವಾರ ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಆರೋಗ್ಯ ಸಚಿವ ಕುಮಾರ್‌ ಕನಾನಿ ಅವರ ಮಗ ಪ್ರಕಾಶ್‌ ಕನಾನಿ ಮತ್ತು ಅವರ ಇಬ್ಬರು ಸ್ನೇಹಿತರು ಬಂಧನಕೊಳ್ಳಗಾದವರು. ಲಾಕ್‌ಡೌನ್‌ ಆದೇಶ ಪಾಲಿಸದ ಪ್ರಕಾಶ್‌ ಕನಾನಿ ಅವರ ಇಬ್ಬರು ಸ್ನೇಹಿತರನ್ನು ರಾತ್ರಿ 10.30 ರ ಸುಮಾರಿಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಸುನೀತಾ ಯಾದವ್‌ ತಡೆದು ಪ್ರಶ್ನಿಸಿದ್ದಾರೆ.

ಈ ವೇಳೆ, ಪ್ರಕಾಶ್‌ ಕನಾನಿಗೆ ಕರೆ ಮಾಡಿದ ಸ್ನೇಹಿತರು ಆತನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.ಕಾರಿನಲ್ಲಿ ಸ್ಥಳಕ್ಕೆ ಬಂದ ಪ್ರಕಾಶ್‌, ಕಾನ್‌ಸ್ಪೆಬಲ್‌ ಜೊತೆಗೆ ವಾಗ್ವಾದ ನಡೆಸಿದ್ದಾರೆ.

ADVERTISEMENT

ಘಟನೆಗೆ ಸಂಬಂಧಪಟ್ಟ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮರುದಿನವೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

‘ನಿಮ್ಮನ್ನು ಇದೇ ಸ್ಥಳದಲ್ಲಿ 365 ದಿನಗಳೂ ನಿಲ್ಲಿಸುವ ಸಾಮರ್ಥ್ಯ ನಮಗಿದೆ’ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಕಾನ್‌ಸ್ಟೆಬಲ್‌, ‘365 ದಿನ ನನ್ನನ್ನು ಇಲ್ಲಿ ನಿಲ್ಲಿಸಲು ನಾನು ನಿಮ್ಮ ಗುಲಾಮಳಲ್ಲ. ಅಥವಾ ನಿಮ್ಮ ತಂದೆಯ ಸೇವಕಿಯಲ್ಲ’ ಎಂದಿದ್ದಾರೆ.

ಕಾನ್‌ಸ್ಪೆಬಲ್‌ ಅನಾರೋಗ್ಯದ ಕಾರಣ ರಜೆ ಹಾಕಿದ್ದು, ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.