ಗುಜರಾತ್‌ನಲ್ಲಿ ಎಎಪಿ ಕಾರ್ಯಕರ್ತರ ಸಂಭ್ರಮ
ಅಹಮದಾಬಾದ್: ಜೂನ್ 19 ರಂದು ಗುಜರಾತ್‌ನ ಎರಡು ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಹೊರಬಂದಿದೆ. ವಿಸಾವದರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ಇಟಾಲಿಯಾ ಗೆಲುವು ಸಾಧಿಸಿದ್ದು, ಕಾಡಿ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಛಾವಡ ಜಯ ಸಾಧಿಸಿದ್ದಾರೆ.
ಇಟಾಲಿಯಾ ಅವರು ಎಎಪಿ ಗುಜರಾತ್ ಘಟಕದ ಮಾಜಿ ಅಧ್ಯಕ್ಷರಾಗಿದ್ದಾರೆ. ಇವರು, ಪ್ರತಿಸ್ಪರ್ಧಿ ಬಿಜೆಪಿಯ ಕಿರಿಟ್ ಪಟೇಲ್ ಎದುರು 17,554 ಮತಗಳ ಅಂತರದಿಂದ ಗೆದ್ದಿದ್ದಾರೆ.
ಇಟಾಲಿಯಾ 75,942 ಮತಗಳನ್ನು ಹಾಗೂ ಪಟೇಲ್ ಅವರು 58,388 ಮತಗಳನ್ನು ಪಡೆದುಕೊಂಡಿದ್ದರು. 21 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ಹಂಚಿಕೊಂಡಿದೆ.
ಎಸ್‌ಸಿ ಮೀಸಲು ಕ್ಷೇತ್ರ ಕಾಡಿಯಲ್ಲಿ ಬಿಜೆಪಿಯ ಅಭ್ಯರ್ಥಿ ರಾಜೇಂದ್ರ ಛಾವಡ ಅವರು ಎದುರಾಳಿಯಾಗಿದ್ದ ಕಾಂಗ್ರೆಸ್‌ನ ರಮೇಶ್ ಛಾವಡ ಅವರ ವಿರುದ್ಧ 39,452 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ.
22 ಸುತ್ತುಗಳ ಮತ ಎಣಿಕೆಯಲ್ಲಿ ರಾಜೇಂದ್ರ ಅವರು 99,742 ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದರಾಗಿದ್ದ ರಮೇಶ್ ಅವರು 60,290 ಮತಗಳನ್ನು ಪಡೆದಿದ್ದಾರೆ.
ಜೂನ್ 19ರಂದು ನಡೆದ ಉಪಚುನಾವಣೆಯಲ್ಲಿ ಕಾಡಿ ಕ್ಷೇತ್ರದಲ್ಲಿ ಶೇ 57.90 ಹಾಗೂ ವಿಸಾವದಾರ ಕ್ಷೇತ್ರದಲ್ಲಿ ಶೇ 56.89 ಮತದಾನವಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.