ADVERTISEMENT

ಗುಜರಾತ್‌: ₹478 ಕೋಟಿ ಮೌಲ್ಯದ ಮಾದಕ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 12:57 IST
Last Updated 30 ನವೆಂಬರ್ 2022, 12:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಹಮದಾಬಾದ್‌ (ಪಿಟಿಐ): ವಡೋದರ ನಗರದ ಹೊರವಲಯದಲ್ಲಿರುವ ಉತ್ಪಾದನಾ ಘಟಕದಲ್ಲಿಗುಜರಾತ್‌ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) ಶೋಧ ನಡೆಸಿ, ₹478ಕೋಟಿ ಮೌಲ್ಯದಮಾದಕ ವಸ್ತುವನ್ನು ವಶಕ್ಕೆ ಪಡೆದಿದೆ.

‘ಮಂಗಳವಾರ ರಾತ್ರಿ ಇಲ್ಲಿನ ಸಣ್ಣ ಕಾರ್ಖಾನೆ–ಗೋದಾಮಿನ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ಕಳೆದ 45 ದಿನಗಳಿಂದ ಕಾರ್ಖಾನೆಯಲ್ಲಿ ಮೆಫೆಡ್ರೋನ್‌ ಮಾದಕವಸ್ತುವನ್ನು ತಯಾರಿಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

‘ಬಂಧಿತರನ್ನು ಸೌಮಿಲ್ ಪಾಠಕ್‌, ಶೈಲೇಶ್‌ ಕಟಾರಿಯಾ, ವಿನೋದ್‌ ನಿಜಮಾ, ಮಹಮ್ಮದ್‌ ಶಫಿ ದೇವನ್‌ ಮತ್ತು ಭರತ್‌ ಚೌದಾ ಎಂದು ಗುರುತಿಸಲಾಗಿದೆ.

ADVERTISEMENT

ಶೋಧ ಕಾರ್ಯಾಚರಣೆ ವೇಳೆ 63.6 ಕೆ.ಜಿ ಮೆಫೆಡ್ರೋನ್‌ ಮತ್ತು 80 ಕೆ.ಜಿ ಕಚ್ಚಾ ಪದಾರ್ಥಗಳು ಮತ್ತು ಮಾದಕವಸ್ತು ಉತ್ಪಾದನೆಗೆ ಬಳಸುತ್ತಿದ್ದ ತಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಟಿಎಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ವಡೋದರ ನಿವಾಸಿ ಸೌಮಿಲ್ ಪಾಠಕ್‌ ‘ಡಾರ್ಕ್‌ ವೆಬ್‌’ನಿಂದ ಮಾದಕ ವಸ್ತು ಉತ್ಪಾದನೆಯನ್ನು ಕಲಿತಿದ್ದ. ಉತ್ಪಾದನಾ ಘಟಕವನ್ನು ಸ್ಥಾಪಿಸಿ ಇತರರನ್ನು ಪ್ರಚೋದಿಸಿದ್ದ. ಇನ್ನೊಬ್ಬ ಆರೋಪಿ ಕಟಾರಿಯಾ ರಸಾಯನಶಾಸ್ತ್ರ ಪದವೀಧರನಾಗಿದ್ದು, ಹಲವು ಪದಾರ್ಥಗಳನ್ನು ಬಳಸಿಕೊಂಡು ಮಾದಕ ವಸ್ತು ಉತ್ಪಾದಿಸುವ ಕೆಲಸ ಮಾಡುತ್ತಿದ್ದ. ಉಳಿದ ಮೂವರು ಇತರೆ ಕೆಲಸಗಳನ್ನು ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.