ADVERTISEMENT

7 ಬಾರಿ ಜಯಗಳಿಸಿದ್ದ ಬುಡಕಟ್ಟು ಜನಾಂಗದ ನಾಯಕನಿಗೆ ಸೋಲು

ಪಿಟಿಐ
Published 8 ಡಿಸೆಂಬರ್ 2022, 16:04 IST
Last Updated 8 ಡಿಸೆಂಬರ್ 2022, 16:04 IST
ಜಗಾಡಿಯಾ ಕ್ಷೇತ್ರದಲ್ಲಿ ಕಣದಲ್ಲಿದ್ದವರು: ಫತೇಸಿಂಗ್ ವಾಸವಾ (ಕಾಂಗ್ರೆಸ್‌), ರಿತೇಶ್‌ ವಾಸವಾ (ಬಿಜೆಪಿ), ಛೋಟುಭಾಯಿ ವಾಸವಾ (ಪಕ್ಷೇತರ).
ಜಗಾಡಿಯಾ ಕ್ಷೇತ್ರದಲ್ಲಿ ಕಣದಲ್ಲಿದ್ದವರು: ಫತೇಸಿಂಗ್ ವಾಸವಾ (ಕಾಂಗ್ರೆಸ್‌), ರಿತೇಶ್‌ ವಾಸವಾ (ಬಿಜೆಪಿ), ಛೋಟುಭಾಯಿ ವಾಸವಾ (ಪಕ್ಷೇತರ).   

ಜಗಡಿಯಾ: ಬಿಜೆಪಿ ಇಲ್ಲಿನ ಜಗಡಿಯಾ ಕ್ಷೇತ್ರವನ್ನು ಇದೇ ಮೊದಲ ಬಾರಿಗೆ ಗೆದ್ದುಕೊಂಡಿದೆ. ಬುಡಕಟ್ಟು ಜನಾಂಗದ ನಾಯಕ, ಏಳು ಬಾರಿ ಶಾಸಕರಾಗಿದ್ದ ಛೋಟುಭಾಯ್ ವಾಸವಾ ಪರಾಜಿತರಾಗಿದ್ದಾರೆ.

ಬಿಜೆಪಿಯ ರಿತೇಶ್ ವಾಸವಾ ಅವರು 23 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ. 78 ವರ್ಷದ ಛೋಟುಭಾಯಿ ಅವರು ಒಂದು ಕಾಲದ ತನ್ನ ಸಹವರ್ತಿ ರಿತೇಶ್ ವಿರುದ್ಧ ಸೋತಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿದೆ. ಎಎಪಿ ಮತ್ತು ಕಾಂಗ್ರೆಸ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಿಸಿವೆ.

ಛೋಟುಭಾಯಿ ಈ ಬಾರಿ ತಾವೇ ಸ್ಥಾಪಿಸಿದ್ದ ಭಾರತೀಯ ಟ್ರೈಬಲ್ ಪಾರ್ಟಿ ಅಭ್ಯರ್ಥಿಯಾಗಿದ್ದು, ಪಕ್ಷೇತರನಾಗಿ ಕಣದಲ್ಲಿದ್ದರು. ಈ ಹಿಂದೆ ಜನತಾದಳ ಅಭ್ಯರ್ಥಿಯಾಗಿ 5 ಬಾರಿ, ಜೆಡಿಯು ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.