
ಅಹಮದಾಬಾದ್: ಗುಜರಾತ್ ಕಾಂಗ್ರೆಸ್‌ನ ಎರಡನೇ ಹಂತದ ‘ಜನ ಆಕ್ರೋಶ ಯಾತ್ರೆ’ಯು ಇದೇ 20ರಂದು ಖೇಡಾ ಜಿಲ್ಲೆಯ ಫಾಗ್ವೆಲ್ ಗ್ರಾಮದಿಂದ ಆರಂಭವಾಗಲಿದ್ದು, ಜನವರಿ 6ರಂದು ದಾಹೋದ್ ಜಿಲ್ಲೆಯಲ್ಲಿ ಕೊನೆಗೊಳ್ಳಲಿದೆ.
ಯಾತ್ರೆಯು 1,400 ಕಿ.ಮೀ ದೂರವನ್ನು ಕ್ರಮಿಸುತ್ತದೆ ಮತ್ತು ಗುಜರಾತಿನ ಮಧ್ಯ ಭಾಗದ ಖೇಡಾ, ಆನಂದ್, ವಡೋದರಾ, ಛೋಟೌದೇಪುರ್, ಪಂಚಮಹಲ್, ಮಹಿಸಾಗರ್ ಮತ್ತು ದಾಹೋದ್ ಜಿಲ್ಲೆಗಳಲ್ಲಿ ಸಾಗಲಿದೆ ಎಂದು ಗುಜರಾತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಚಾವ್ಡಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರು, ವಿದ್ಯಾರ್ಥಿಗಳು, ಯುವ ಜನ, ಮಹಿಳೆಯರು ಮತ್ತು ಕಾರ್ಮಿಕರ ಸಮಸ್ಯೆಗಳ ಕುರಿತು ಯಾತ್ರೆಯಲ್ಲಿ ಧ್ವನಿಯೆತ್ತಲಾಗುವುದು ಎಂದು ಅವರು ವಿವರಿಸಿದರು.
ನವೆಂಬರ್ 21ರಿಂದ ಡಿಸೆಂಬರ್ 3ರವರೆಗೆ ಉತ್ತರ ಗುಜರಾತ್ ಭಾಗದಲ್ಲಿ ಕಾಂಗ್ರೆಸ್ ಜನ ಆಕ್ರೋಶ ಯಾತ್ರೆಯ ಮೊದಲ ಹಂತ ಸಾಗಿತ್ತು. ರೈತರ ಸಮಸ್ಯೆ, ಪರಿಹಾರ ಬಗ್ಗೆ ಹಾಗೂ ಮದ್ಯ, ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಧ್ವನಿಯೆತ್ತಲಾಗಿತ್ತು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.