ADVERTISEMENT

ಗುಜರಾತ್: ಸ್ಥಳೀಯ ಸಂಸ್ಥೆ ಚುನಾವಣೆ; 31 ಮುಸ್ಲಿಂ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್

ಪಿಟಿಐ
Published 12 ಫೆಬ್ರುವರಿ 2021, 13:10 IST
Last Updated 12 ಫೆಬ್ರುವರಿ 2021, 13:10 IST
ಬಿಜೆಪಿ ಚಿಹ್ನೆ
ಬಿಜೆಪಿ ಚಿಹ್ನೆ   

ಬರೂಚ್: ಗುಜರಾತ್‌ನ ಬರೂಚ್‌ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಒಟ್ಟು 31 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿಸಿನ್ಹಾ ಅಟೊದಾರಿಯಾ ಅವರ ಪ್ರಕಾರ, ಪಕ್ಷ ಇಷ್ಟು ಸಂಖ್ಯೆಯಲ್ಲಿ ಮುಸಲ್ಮಾನರನ್ನು ಚುನಾವಣೆಗೆ ಕಣಕ್ಕಿಳಿಸಿರುವುದು ಇದೇ ಮೊದಲು.

ಆದರೆ, ಮುಸಲ್ಮಾನರನ್ನು ಕಣಕ್ಕಿಳಿಸಿರುವುದಕ್ಕೂ, ವಿರೋಧಿ ಪಾಳಯದಲ್ಲಿ ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಬಿ) ಮತ್ತು ಅಸಾಸುದ್ದೀನ್ ಒವೈಸಿ ಅವರ ಪಕ್ಷದ ಜೊತೆಗಿನ ಮೈತ್ರಿಗೂ ಸಂಬಂಧವಿಲ್ಲ ಎಂದರು.

ADVERTISEMENT

ಬರೂಚ್ ಜಿಲ್ಲೆಯಲ್ಲಿ ಮುಸಲ್ಮಾನರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ 9 ತಾಲ್ಲೂಕು ಪಂಚಾಯಿತಿಗಳು ಮತ್ತು ನಾಲ್ಕು ಪುರಸಭೆಗಳಿಗೆ ಚುನಾವಣೆ ನಡೆಯುತ್ತಿದೆ.

ಬಿಜೆಪಿ ಒಟ್ಟು 320 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಇವರಲ್ಲಿ 31 ಮಂದಿ ಮುಸಲ್ಮಾನರು. ಇದು, ಇದುವರೆಗಿನ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಅಟೊದಾರಿಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.