ADVERTISEMENT

ಮೊರ್ಬಿ ಸೇತುವೆ ದುರಂತಕ್ಕೆ ಬಿಜೆಪಿಯ ಕೆಟ್ಟ ಆಡಳಿತ ಕಾರಣ: ಎಎಪಿ

ತೂಗುಸೇತುವೆ ದುರಂತಕ್ಕೆ ಬಿಜೆಪಿಯನ್ನು ಟೀಕಿಸಿದ ಆಮ್ ಆದ್ಮಿ ಪಾರ್ಟಿ

ಪಿಟಿಐ
Published 2 ನವೆಂಬರ್ 2022, 2:56 IST
Last Updated 2 ನವೆಂಬರ್ 2022, 2:56 IST
   

ನವದೆಹಲಿ: ಗುಜರಾತ್‌ನ ಮೊರ್ಬಿಯಲ್ಲಿ ಸಂಭವಿಸಿದ ತೂಗುಸೇತುವೆ ದುರಂತಕ್ಕೆ ಬಿಜೆಪಿಯ ದುರಾಡಳಿತವೇ ಕಾರಣ ಎಂದು ಆಮ್ ಆದ್ಮಿ ಪಾರ್ಟಿ(ಎಎಪಿ) ಹೇಳಿದೆ.

ಸೇತುವೆ ಕುಸಿದಿರುವುದು ದುರಂತವಲ್ಲ, ಅದು ಬಿಜೆಪಿ ಸರ್ಕಾರದ ದುರಾಡಳಿತ ನಡೆಸಿದ ಕೊಲೆ ಎಂದು ಎಎಪಿ ತಿಳಿಸಿದೆ.

ಗುಜರಾತ್‌ನ ಮೊರ್ಬಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ತೂಗುಸೇತುವೆ ದುರಂತದಲ್ಲಿ 134 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ADVERTISEMENT

ಬಿಜೆಪಿಯ ಭ್ರಷ್ಟಾಚಾರಕ್ಕೆ ಸಿಲುಕಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸೇತುವೆ ನಿರ್ವಹಣೆ ಮತ್ತು ದುರಸ್ಥಿಯನ್ನು ಸರಿಯಾಗಿ ಮಾಡದಿರವುದರಿಂದ ದುರಂತ ಸಂಭವಿಸಿದೆ. ಅಂತಹ ದೊಡ್ಡ ಗುತ್ತಿಗೆಯನ್ನು ನೀಡುವಾಗ ಸರ್ಕಾರ ಸರಿಯಾಗಿ ಗಮನಿಸಬೇಕಿತ್ತು ಎಂದು ಆಮ್ ಆದ್ಮಿ ಪಾರ್ಟಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.