ADVERTISEMENT

ಗಡಿಯಲ್ಲಿ ಬೆಳಗುತ್ತಿರುವುದು 616 ದೀಪ!

ಪಿಟಿಐ
Published 25 ಡಿಸೆಂಬರ್ 2018, 19:05 IST
Last Updated 25 ಡಿಸೆಂಬರ್ 2018, 19:05 IST

ನವದೆಹಲಿ: ಗುಜರಾತ್‌ ಮತ್ತು ಗಾಂಧಿನಗರ ವಲಯದಲ್ಲಿರುವ ಭಾರತ–ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯಲ್ಲಿ ಸ್ಥಾಪಿಸಲಾಗಿರುವ 2,061 ವಿದ್ಯುತ್‌ ದೀಪಗಳ ಪೈಕಿ ಕೇವಲ 616 ಮಾತ್ರ ಕಾರ್ಯನಿರ್ವಹಿಸುತ್ತಿವೆ.

ನವೆಂಬರ್‌ನಲ್ಲಿ ನಡೆದ ಇಲಾಖಾ ಮಟ್ಟದ ಸಹಕಾರ ಸಭೆಯಲ್ಲಿ ಗಡಿಭದ್ರತಾ ಪಡೆಯು ಕೇಂದ್ರೀಯ ಲೋಕೋಪಯೋಗಿ ಇಲಾಖೆಗೆ (ಸಿಪಿಡಬ್ಲ್ಯು)ತಿಳಿಸಿದೆ.

ಗಡಿಯಲ್ಲಿ 82 ಡಿಸೇಲ್‌ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 32 ಮಾತ್ರ ಕೆಲಸ ಮಾಡುತ್ತಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದು, ಇದರಿಂದ ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ತೊಂದರೆಯಾಗುತ್ತಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.