ADVERTISEMENT

ಅಸ್ಸಾಂ ಹಳ್ಳಿಯಲ್ಲಿ ಗುಂಡಿನ ದಾಳಿ; ಇಬ್ಬರ ಸಾವು, ಒಬ್ಬರಿಗೆ ಗಾಯ

ಡಿಎನ್‌ಎಲ್‌ಎ ಉಗ್ರಗಾಮಿ ಸಂಘಟನೆ ಮೇಲೆ ಶಂಕೆ

ಪಿಟಿಐ
Published 28 ಜನವರಿ 2021, 6:48 IST
Last Updated 28 ಜನವರಿ 2021, 6:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಿಫು: ಅಪರಿಚಿತ ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ಅಸ್ಸಾಂನ ಕರ್ಬಿ ಅಂಗ್ಲಾಂಗ್‌ ಜಿಲ್ಲೆಯ ಧಾನ್ಸಿರಿ ಸಮೀಪದ ಹಳ್ಳಿಯಲ್ಲಿ ನಡೆದಿದೆ.

ಧಾನ್ಸಿರಿ ಸಮೀಪದ ಖಾರ್ನೈದಿಸಾ ಹಳ್ಳಿಯಲ್ಲಿ ಬುಧವಾರ ರಾತ್ರಿ ಬುಷು ದಿಮಾ ಹಬ್ಬ ಆಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಕರ್ಬಿ ಅಂಗ್ಲಾಂಗ್‌ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೇಬಜಿತ್‌ ದಿಯೋರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮೃತರನ್ನು ಅಮಿತ್ ಸುನಿಸಾ (42) ಮತ್ತು ಅಲೊಟಾ ಮೈಬೊಗ್ಸಾ (60) ಎಂದು ಗುರಿತಿಸಿರುವುದಾಗಿ ಎಸ್‌ಪಿ ತಿಳಿಸಿದ್ದಾರೆ. ಅಶಿತಾ ಫೊಂಗ್ಲೊಸಾ (25) ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಘಟನೆಯ ಹಿಂದೆ ದಿಮಸಾ ನ್ಯಾಷನಲ್ ಲಿಬರೇಷನ್ ಆರ್ಮಿ (ಡಿಎನ್‌ಎಲ್‌ಎ) ಸಂಘಟನೆಯ ಉಗ್ರರ ಕೈವಾಡವಿದೆ ಎಂದು ಶಂಕಿಸಲಾಗಿದೆ. ತನಿಖೆ ಮುಂದುವುರಿದಿರುವುದಾಗಿ ಎಸ್‌ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.