ADVERTISEMENT

ಡೇರಾ ಸಚ್ಛಾ ಸೌದಾ ಮುಖ್ಯಸ್ಥ ಗುರ್ಮೀತ್‌ ಸಿಂಗ್‌ಗೆ ಪರೋಲ್‌: ಪಂಜಾಬ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 12:54 IST
Last Updated 4 ಮಾರ್ಚ್ 2023, 12:54 IST
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌   

ಚಂಡೀಗಢ (ಪಿಟಿಐ): ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ನಡೆಸಿದ ಅಪರಾಧಕ್ಕಾಗಿ 20 ವರ್ಷ ಜೈಲುಶಿಕ್ಷೆಗೆ ಒಳಗಾಗಿರುವ ಡೇರಾ ಸಚ್ಛಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಮೇಲಿಂದ ಮೇಲೆ ಪರೋಲ್‌ ನೀಡುತ್ತಿರುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು ಎಂದು ಪಂಜಾಬ್‌ ಸರ್ಕಾರವು ಹೈಕೋರ್ಟ್‌ಗೆ ಹೇಳಿದೆ.

ಪರೋಲ್‌ ಮೇಲೆ ಗುರ್ಮೀತ್‌ ಸಿಂಗ್‌ ಬಿಡುಗಡೆ ಆಗುತ್ತಿರುವುದನ್ನು ವಿರೋಧಿಸಿ ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ (ಎಸ್‌ಜಿಪಿಸಿ) ಸಲ್ಲಿಸಿದ್ದ ಅರ್ಜಿಗೆ ಪಂಜಾಬ್‌ ಸರ್ಕಾರವು ಈ ರೀತಿ ಪ್ರತಿಕ್ರಿಯಿಸಿದೆ.

ಇದೇ ಅರ್ಜಿಗೆ ಹರಿಯಾಣ ಸರ್ಕಾರವು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿತ್ತು. ಗುರ್ಮೀತ್‌ ಉಗ್ರ ಕೈದಿಯಲ್ಲ, ಅವರನ್ನು ಸರಣಿ ಹಂತಕ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿ ಆತನಿಗೆ ನೀಡಲಾಗಿದ್ದ ಪರೋಲನ್ನು ಸಮರ್ಥಿಸಿಕೊಂಡಿತ್ತು.

ADVERTISEMENT

ಗುರ್ಮೀತ್‌ಗೆ ಜನವರಿ 20ರಂದು 40 ದಿನಗಳ ಕಾಲ ಪರೋಲ್‌ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.