ADVERTISEMENT

Gyanvapi Mosque: ವರದಿ ಸಲ್ಲಿಕೆಗೆ 3 ವಾರಗಳ ಕಾಲಾವಕಾಶ ಕೋರಿದ ಎಎಸ್‌ಐ

ಪಿಟಿಐ
Published 28 ನವೆಂಬರ್ 2023, 13:23 IST
Last Updated 28 ನವೆಂಬರ್ 2023, 13:23 IST
<div class="paragraphs"><p>ಜ್ಞಾನವಾಪಿ ಮಸೀದಿ ಆ</p></div>

ಜ್ಞಾನವಾಪಿ ಮಸೀದಿ ಆ

   

(ಪಿಟಿಐ ಚಿತ್ರ)

ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆಸಲಾಗಿರುವ ವೈಜ್ಞಾನಿಕ ಸಮೀಕ್ಷೆಯ ವರದಿ (ಎಎಸ್‌ಐ) ಸಲ್ಲಿಸಲು ಇನ್ನೂ ಮೂರು ವಾರಗಳ ಸಮಯಾವಕಾಶವನ್ನು ನೀಡಬೇಕು ಎಂದು ಕೋರಿ ಪುರಾತತ್ವ ಇಲಾಖೆಯು ಜಿಲ್ಲಾ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದೆ.

ADVERTISEMENT

ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಲಿದೆ.

ಹಲವು ತಜ್ಞರಿಂದ ಮತ್ತು ಹಲವು ಸಾಧನಗಳನ್ನು ಬಳಸಿ ಕಲೆಹಾಕಿರುವ ಮಾಹಿತಿಯನ್ನು ಸಮೀಕರಿಸಿ ವರದಿ ತಯಾರಿಸಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಎಎಸ್‌ಐ ಅರ್ಜಿಯಲ್ಲಿ ತಿಳಿಸಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ಮದನ್‌ ಮೋಹನ್‌ ಯಾದವ್‌ ಅವರು ಹೇಳಿದರು. 

ಮೊದಲೇ ಇದ್ದ ಹಿಂದೂ ದೇವಾಲಯದ ರಚನೆಯ ಮೇಲೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.