ಲಖನೌ: ಹಿಂದೂಗಳ ಆರಾಧ್ಯ ದೈವ ಹನುಮಾನ್ ಒಬ್ಬ ಕ್ರೀಡಾಪಟು ಎಂದು ಉತ್ತರಪ್ರದೇಶದ ಕ್ರೀಡಾ ಸಚಿವರೂ ಆಗಿರುವ ಮಾಜಿ ಕ್ರಿಕೆಟ್ ಆಟಗಾರ ಚೇತನ್ ಚೌಹಾನ್ ವ್ಯಾಖ್ಯಾನಿಸಿದ್ದಾರೆ.
‘ಹನುಮಾನ್ ಒಬ್ಬ ದೇವರು. ನಾನು ಆತನನ್ನು ದೇವರೆಂದೇ ಪರಿಗಣಿಸುತ್ತೇನೆ ಹಾಗೂ ಆರಾಧಿಸುತ್ತೇನೆ. ನಾನೊಬ್ಬ ಕ್ರೀಡಾಪಟು ಮತ್ತು ಎಲ್ಲ ಕ್ರೀಡಾಪಟುಗಳು ಶಕ್ತಿಯನ್ನು ಪೂಜಿಸುತ್ತಾರೆ. ಹನುಮಂತ ಶಕ್ತಿ ಮತ್ತು ಸತ್ವದ ಸಂಕೇತ. ಅವರು ಕುಸ್ತಿಪಟುವಾಗಿದ್ದರು ಹಾಗೂ ಎಲ್ಲ ಕುಸ್ತಿಪಟುಗಳು ಅವರನ್ನು ಆರಾಧಿಸುತ್ತಿದ್ದಾರೆ ಎಂದು ಚೌಹಾನ್ ಹೇಳಿದ್ದಾರೆ.
ಉತ್ತರಪ್ರದೇಶದ ಅಮ್ರೋಹಾದಲ್ಲಿ ಭಾನುವಾರ ಮಾತನಾಡಿದ ಅವರು, ‘ದೇವರು ಹಾಗೂ ಸಂತರಿಗೆ ಯಾವ ಜಾತಿ ಮತ್ತು ಧರ್ಮಗಳು ಇಲ್ಲ. ನಾನು ಹನುಮಂತನನ್ನು ದೇವರೆಂದೇ ಪರಿಗಣಿಸುತ್ತೇನೆ. ಜಾತಿ ಆಧರಿತವಾಗಿ ಬೇರ್ಪಡಿಸುವುದಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.