ADVERTISEMENT

ಹಾರ್ದಿಕ್ ಪಟೇಲ್ ಕಾಂಗ್ರೆಸ್‌ಗೆ ವಿದಾಯ?

​ಪ್ರಜಾವಾಣಿ ವಾರ್ತೆ
Published 13 ಮೇ 2022, 16:01 IST
Last Updated 13 ಮೇ 2022, 16:01 IST
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್   

ಅಹಮದಾಬಾದ್‌:ಮುಂಬರುವ ವಿಧಾನಸಭಾಚುನಾವಣೆಗೂ ಮೊದಲೇ ಗುಜರಾತ್ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. ಕಾರಣ, ಪಕ್ಷದರಾಜ್ಯ ಘಟಕದ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್, ಪಾಟೀದಾರ್ ಮೀಸಲಾತಿ ಆಂದೋಲನದ ನಾಯಕ ಯಾವುದೇ ಕ್ಷಣದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಈ ವಾರದ ಆರಂಭದಲ್ಲಿ ಕೇಂದ್ರ ಗುಜರಾತ್‌ನ ದಾಹೋಡ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಜತೆ ಕೊನೆ ಬಾರಿಗೆ ಕಾಣಿಸಿಕೊಂಡಿದ್ದಪಾಟೀದಾರ್ ನಾಯಕ ಹಾರ್ದಿಕ್‌, ‘ಪಕ್ಷದವರೇ ನನ್ನನ್ನು ನಿರ್ಲಕ್ಷಿಸಿ, ಮೂಲೆಗುಂಪು ಮಾಡುತ್ತಿದ್ದಾರೆ’ ಎಂದು ಬಹಿರಂಗವಾಗಿ ಟೀಕಿಸಿದ್ದಾರೆ. ರಾಹುಲ್‌ ಗಾಂಧಿಯವರಿಂದ ‘ತೇಜೋವಧೆ’ಗೆ ಒಳಗಾದ ನಂತರ ಹಾರ್ದಿಕ್‌ ಪಕ್ಷ ತೊರೆಯುವ ಮನಸು ಮಾಡಿದ್ದಾರೆ ಎನ್ನಲಾಗಿದೆ.

‘ಹಾರ್ದಿಕ್ ಮತ್ತು ಕಾಂಗ್ರೆಸ್ ನಡುವಿನ ಬಿಕ್ಕಟ್ಟು ಶಮನವಾಗುವ ಲಕ್ಷಣ ಕಾಣಿಸುತ್ತಿಲ್ಲ.ರಾಜಸ್ಥಾನದ ಉದಯಪುರದಲ್ಲಿ ಆಯೋಜನೆಯಾಗಿರುವ ಪಕ್ಷದ ಮೂರು ದಿನಗಳ ಚಿಂತನ-ಮಂಥನ ಅಧಿವೇಶನದಿಂದ ಹಾರ್ದಿಕ್ ಹೊರಗುಳಿಯಲಿದ್ದಾರೆ’ ಎಂದು ಹಾರ್ದಿಕ್‌ ಅವರ ನಿಕಟವರ್ತಿಗಳ ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.