ಫರೀದಾಬಾದ್‌ನಲ್ಲಿ ಎ.ಸಿ ಕಂಪ್ರೆಸರ್ ಸ್ಫೋಟಗೊಂಡ ಕಟ್ಟಡಕ್ಕೆ ಹಾನಿಯಾಗಿರುವುದು
ಪಿಟಿಐ ಚಿತ್ರ
ಫರೀದಾಬಾದ್ (ಹರಿಯಾಣ): ಇಲ್ಲಿನ ಮನೆಯೊಂದರಲ್ಲಿ ಎ.ಸಿ ಕಂಪ್ರೆಸರ್ ಸ್ಫೋಟಗೊಂಡು, ದಂಪತಿ ಹಾಗೂ ಮಗಳು ಮೃತಪಟ್ಟ ಪ್ರಕರಣ ಸೋಮವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ಗ್ರೀನ್‌ಫೀಲ್ಡ್ ಕಾಲೊನಿಯಲ್ಲಿ ಬೆಳಿಗ್ಗೆ 3.30ರ ಸುಮಾರಿಗೆ ಶಾರ್ಟ್ ಸರ್ಕೀಟ್‌ನಿಂದ ಎ.ಸಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತರನ್ನು ಸಚಿನ್ ಕಪೂರ್ (49) ಪತ್ನಿ ರಿಂಕಿ ಕಪೂರ್ (48) ಸುಜ್ಜೈನ್ (13) ಎಂದು ಗುರುತಿಸಲಾಗಿದೆ.
‘ನಾಲ್ಕು ಮಹಡಿಗಳ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸವಾಗಿದ್ದ ದಂಪತಿಯು ಸ್ಫೋಟ ಸಂಭವಿಸಿದ ತಕ್ಷಣವೇ ಎಚ್ಚೆತ್ತುಕೊಂಡು ಚಾವಣಿ ಏರಲು ಮುಂದಾದರು. ಆದರೆ ಮನೆಯ ಬಾಗಿಲು ಲಾಕ್ ಆಗಿದ್ದರಿಂದ ತೆಗೆಯಲಾಗದೆ ಅಲ್ಲಿಯೇ ಉಳಿದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ. ದಂಪತಿಯ ಮತ್ತೊಬ್ಬ ಮಗ ಬಾಲ್ಕನಿಯಿಂದ ಜಿಗಿದಿದ್ದು, ಕಾಲಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ.
ಗಾಯಗೊಂಡ ಆರ್ಯನ್ ಕಪೂರ್ (24)ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.