ADVERTISEMENT

ಆಮ್ಲಜನಕ ಸಾಗಣೆಗೆ ಹರಿಯಾಣ ಅಧಿಕಾರಿಯಿಂದ ತಡೆ: ಸಿಸೋಡಿಯಾ ಆರೋಪ

ಪಿಟಿಐ
Published 21 ಏಪ್ರಿಲ್ 2021, 15:07 IST
Last Updated 21 ಏಪ್ರಿಲ್ 2021, 15:07 IST
ಮನೀಶ್‌ ಸಿಸೋದಿಯಾ
ಮನೀಶ್‌ ಸಿಸೋದಿಯಾ   

ನವದೆಹಲಿ: ಫರೀದಾಬಾದ್‌ನಲ್ಲಿರುವ ಉತ್ಪಾದನಾ ಘಟಕದಿಂದ ದೆಹಲಿಗೆ ಆಮ್ಲಜನಕ ಸಾಗಿಸುವುದಕ್ಕೆ ಹರಿಯಾಣದ ಅಧಿಕಾರಿಯೊಬ್ಬರು ತಡೆವೊಡ್ಡಿದರು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಬುಧವಾರ ಆರೋಪಿಸಿದರು.

‘ಇಂಥದೇ ಘಟನೆ ಉತ್ತರ ಪ್ರದೇಶದಲ್ಲಿ ಮಂಗಳವಾರ ನಡೆದ ಬಗ್ಗೆ ವರದಿಯಾಗಿದೆ. ಇದರಿಂದ ಹಲವಾರು ಆಸ್ಪತ್ರೆಗಳಲ್ಲಿ ಸಾಕಷ್ಟು ತೊಂದರೆಯಾಯಿತು’ ಎಂದ ಅವರು, ‘ಈಗ ಆಮ್ಲಜನಕದ ಪೂರೈಕೆ ಆರಂಭಗೊಂಡಿದೆ’ ಎಂದರು.

‘ಯಾವ ರಾಜ್ಯಕ್ಕೆ ಎಷ್ಟು ಆಮ್ಲಜನಕ ಪೂರೈಸಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಸಮಸ್ಯೆ ಉಲ್ಬಣಿಸಿರುವ ಕಾರಣ, ದೆಹಲಿಯ ಕೋಟಾವನ್ನು 378 ಮೆಟ್ರಿಕ್‌ ಟನ್‌ಗಳಿಂದ 700 ಮೆಟ್ರಿಕ್‌ ಟನ್‌ಗೆ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಈ ಕುರಿತು ಕೇಂದ್ರ ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ನಿಗದಿ ಮಾಡಿರುವ ಕೋಟಾದಷ್ಟು ಆಮ್ಲಜನಕವನ್ನು ಆಯಾ ರಾಜ್ಯಗಳಿಗೆ ನೀಡಬೇಕು. ಈ ವಿಷಯದಲ್ಲಿ ಇತರರು ಹಸ್ತಕ್ಷೇಪ ಮಾಡಬಾರದು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.