ADVERTISEMENT

ಹರಿಯಾಣ: ಐಎನ್‌ಎಲ್‌ಡಿ ಮುಖಂಡ ನಫೇ ಸಿಂಗ್‌ ಹತ್ಯೆ

ಪಿಟಿಐ
Published 25 ಫೆಬ್ರುವರಿ 2024, 15:41 IST
Last Updated 25 ಫೆಬ್ರುವರಿ 2024, 15:41 IST
<div class="paragraphs"><p> ನಫೇ ಸಿಂಗ್‌</p></div>

ನಫೇ ಸಿಂಗ್‌

   

ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಹರಿಯಾಣ ಘಟಕದ ಅಧ್ಯಕ್ಷ ನಫೇ ಸಿಂಗ್ ರಾಠೀ ಮತ್ತು ಪಕ್ಷದ ಒಬ್ಬ ಕಾರ್ಯಕರ್ತ ನವದೆಹಲಿ ಸಮೀಪದ ಜಜ್ಜರ್‌ ಜಿಲ್ಲೆಯ ಬಹದ್ದೂರ್‌ಗಢದಲ್ಲಿ ಭಾನುವಾರ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.

‘ರಾಠೀ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗರೆದಿದ್ದಾರೆ. ಘಟನೆಯಲ್ಲಿ ರಾಠೀ ಮತ್ತು ಅವರ ಜತೆಗಿದ್ದ ಪಕ್ಷದ ಒಬ್ಬ ಕಾರ್ಯಕರ್ತ ಬಲಿಯಾಗಿದ್ದಾರೆ. ಅವರ ಭದ್ರತೆಗೆ ನಿಯೋಜಿಸಿದ್ದ ಮೂವರು ಗನ್‌ಮ್ಯಾನ್‌ಗಳು ಗಾಯಗೊಂಡಿದ್ದಾರೆ’ ಎಂದು ಐಎನ್ಎಲ್‌ಡಿ ಮುಖಂಡ ಅಭಯ್‌ ಚೌಟಾಲಾ ಹೇಳಿದ್ದಾರೆ.

ADVERTISEMENT

70 ವರ್ಷದ ರಾಠೀ ಅವರು ಬಹದ್ದೂರ್‌ಗಢದ ಮಾಜಿ ಶಾಸಕರೂ ಹೌದು. ‘ಎರಡು ಬಾರಿಯ ಶಾಸಕರೂ ಆಗಿರುವ ರಾಠೀ ಅವರಿಗೆ ಪೊಲೀಸ್‌ ಭದ್ರತೆ ಒದಗಿಸಿರಲಿಲ್ಲ. ಅವರಿಗೆ ಜೀವ ಬೆದರಿಕೆಯಿದ್ದು, ಭದ್ರತೆ ಒದಗಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಗೃಹ ಸಚಿವರಿಗೆ ಮನವಿ ಮಾಡಿದ್ದೆವು. ಆದರೂ ಭದ್ರತೆ ನೀಡಿಲ್ಲ’ ಎಂದು ಚೌಟಾಲಾ ಆರೋಪಿಸಿದರು. 

ಈ ಘಟನೆಯ ಬೆನ್ನಲ್ಲೇ ವಿರೋಧ ಪಕ್ಷಗಳು, ಮನೋಹರಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿವೆ. ‘ರಾಠೀ ಅವರ ಹತ್ಯೆಯ ಸುದ್ದಿ ದುಃಖ ಉಂಟುಮಾಡಿದೆ. ಹರಿಯಾಣದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ. ಇಂದು ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಭೂಪಿಂದರ್‌ ಸಿಂಗ್‌ ಹೂಡಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.