ADVERTISEMENT

ಹಾಥರಸ್‌: ಎಸ್‌ಐಟಿ ತನಿಖೆ ಪೂರ್ಣ, ಹಳ್ಳಿ ಪ್ರವೇಶಕ್ಕೆ ಮಾಧ್ಯಮದವರಿಗೆ ಅವಕಾಶ

ಪಿಟಿಐ
Published 3 ಅಕ್ಟೋಬರ್ 2020, 7:37 IST
Last Updated 3 ಅಕ್ಟೋಬರ್ 2020, 7:37 IST
ದಲಿತ ಮಹಿಳೆ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದಲಿತ ಮಹಿಳೆ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಹಾಥರಸ್‌: ದಲಿತ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದ ತನಿಖೆ ಪೂರ್ಣ ಗೊಂಡಿದ್ದು, ಸಂತ್ರಸ್ತೆಯ ಹಳ್ಳಿಯ ಪ್ರವೇಶಕ್ಕೆ ಮಾಧ್ಯಮದವರಿಗೆ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

ಎಸ್‌ಐಟಿ ತನಿಖೆ ಪ್ರಕ್ರಿಯೆಯಲ್ಲಿದ್ದ ಕಾರಣ ಮಾಧ್ಯಮದವರು, ರಾಜಕಾರಣಿಗಳು ಸೇರಿದಂತೆ ಹೊರಗಿನವರಿಗೆ ಸಂತ್ರಸ್ತೆಯ ಹಳ್ಳಿಯ ಪ್ರವೇಶಕ್ಕೆ ಮತ್ತು ಕುಟುಂಬದವರನ್ನು ಭೇಟಿಯಾಗಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ಕೇವಲ ಮಾಧ್ಯಮದವರಿಗಷ್ಟೇ ಹಳ್ಳಿಯನ್ನು ಪ್ರವೇಶಿಸಲು ಹಾಗೂ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ‘ ಎಂದು ಜಂಟಿ ಜಿಲ್ಲಾಧಿಕಾರಿ ಪ್ರೇಮ್‌ ಪ್ರಕಾಶ್ ಮೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದೇ ವೇಳೆ ಜಿಲ್ಲಾಡಳಿತ ಸಂತ್ರಸ್ತೆ ಕುಟುಂಬವನ್ನು ಕೂಡಿಹಾಕಿದ್ದು, ಅವರ ಮೊಬೈಲ್‌ಫೋನ್‌ಗಳನ್ನು ವಶಪಡಿಸಿಕೊಂಡಿದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.