ADVERTISEMENT

ಹಾಥರಸ್ ಸಂತ್ರಸ್ತೆ ಕುಟುಂಬಕ್ಕೆ ರಕ್ಷಣೆಗೆ ಆಗ್ರಹ

ಪಿಟಿಐ
Published 21 ನವೆಂಬರ್ 2020, 12:21 IST
Last Updated 21 ನವೆಂಬರ್ 2020, 12:21 IST

ಲಖನೌ: ಹಾಥರಸ್ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯ ಕುಟುಂಬ ಸದಸ್ಯರಿಗೆ ನೀಡಿದ್ದ ಸಿಆರ್‌ಪಿಎಫ್‌ ಭದ್ರತೆ ಹಿಂತೆಗೆದುಕೊಂಡ ನಂತರ, ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ನಾಗರಿಕ ಹಕ್ಕು ಸಂಘಟನೆಗಳು ತಿಳಿಸಿವೆ.

ನಾಗರಿಕ ಸ್ವಾತಂತ್ರ್ಯ ಕುರಿತ ಜನರ ಸಂಘಟನೆ (ಪಿಯುಸಿಎಲ್‌) ಈ ಕುರಿತುಶನಿವಾರ ವರದಿಯನ್ನು ಬಿಡುಗಡೆ ಮಾಡಿದೆ. ಕುಟುಂಬಕ್ಕೆ ಭದ್ರತೆ ನೀಡಬೇಕು ಹಾಗೂ ನಿರ್ಭಯ ನಿಧಿಯಡಿ ಅವರಿಗೆ ಪುನರ್‌ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಇಡೀ ಕುಟುಂಬ ಸದ್ಯ ಗೃಹಬಂಧನದಲ್ಲಿದೆ. ಅವರ ಸಾಮಾಜಿಕ ಬದುಕು ಸಮಾಜದಿಂದ ಪ್ರತ್ಯೇಕಗೊಂಡಿದೆ ಎಂದು ಪಿಯುಸಿಎಲ್‌ ಸದಸ್ಯರಾದ ಕಮಲ್ ಸಿಂಗ್, ಫರ್ಮಾನ್ ನಕ್ವಿ ಇತರರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.