ADVERTISEMENT

ಕೋವಿಡ್‌: ತಜ್ಞವೈದ್ಯರೊಂದಿಗೆ ಸಚಿವ ಮಾಂಡವಿಯಾ ಸಂವಾದ

ಪಿಟಿಐ
Published 11 ಜನವರಿ 2022, 14:10 IST
Last Updated 11 ಜನವರಿ 2022, 14:10 IST
ಮನ್ಸುಖ್‌ ಮಾಂಡವಿಯಾ
ಮನ್ಸುಖ್‌ ಮಾಂಡವಿಯಾ   

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಅವರು ದೇಶದ ವಿವಿಧ ಭಾಗಗಳ ತಜ್ಞವೈದ್ಯರೊಂದಿಗೆ ಮಂಗಳವಾರ ವರ್ಚುವಲ್ ಆಗಿ ಸಂವಾದ ನಡೆಸಿ, ದೇಶದಾದ್ಯಂತ ಇರುವ ಕೋವಿಡ್–19 ಸ್ಥಿತಿ ಕುರಿತು ಚರ್ಚಿಸಿದರು.

‘ದೇಶದಲ್ಲಿನ ಕೋವಿಡ್‌–19 ಸ್ಥಿತಿ ಕುರಿತು 120 ತಜ್ಞವೈದ್ಯರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚರ್ಚೆ ನಡೆಸಿದೆ. ಅವರ ಸಲಹೆಗಳನ್ನು ಆಲಿಸಿದ್ದು, ಸೂಕ್ತ ಸೂಚನೆಗಳನ್ನು ನೀಡಲಾಯಿತು’ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ಕೊರೊನಾ ಸೋಂಕಿನ ವಿರುದ್ಧ ನಾವೆಲ್ಲಾ ಒಂದಾಗಿ ಹೋರಾಡಬೇಕಿದೆ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಕೆಲ ರಾಜ್ಯಗಳ ಆರೋಗ್ಯ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ಮಾಹಿತಿ ಆಯುಕ್ತರೊಂದಿಗೆ ಸಚಿವ ಮಾಂಡವಿಯಾ ಅವರು ವರ್ಚುವಲ್‌ ಮೂಲಕ ಸೋಮವಾರ ಸಂವಾದ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.